ಬೆಳೆ ವಿಮೆ ನೋಂದಣಿಗೆ ಅವಕಾಶ ಕಲ್ಪಿಸಲಿ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೆತ ಸಂದಿಂದ ತಹಸೀಲ್ದಾರ್​ ವಿಠ್ಠಲ ಚೌಗಲಾ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು. ಮಲ್ಲಿಕಾರ್ಜುನ ಬಳ್ಳಾರಿ, ಅಡಿವೆಪ್ಪ ಆಲದಕಟ್ಟಿ, ಮರಿಗೌಡ ಪಾಟೀಲ, ಸೋಮಣ್ಣ ಜಡೆಗೊಂಡರ, ರುದ್ರಪ್ಪ ಹಣ್ಣಿ, ಶಿವಯೋಗಿ ಹೊಸಗೌಡ್ರ, ಮಾಲತೇಶ ಪರಪ್ಪನವರ ಇದ್ದರು.
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೆತ ಸಂದಿಂದ ತಹಸೀಲ್ದಾರ್​ ವಿಠ್ಠಲ ಚೌಗಲಾ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು. ಮಲ್ಲಿಕಾರ್ಜುನ ಬಳ್ಳಾರಿ, ಅಡಿವೆಪ್ಪ ಆಲದಕಟ್ಟಿ, ಮರಿಗೌಡ ಪಾಟೀಲ, ಸೋಮಣ್ಣ ಜಡೆಗೊಂಡರ, ರುದ್ರಪ್ಪ ಹಣ್ಣಿ, ಶಿವಯೋಗಿ ಹೊಸಗೌಡ್ರ, ಮಾಲತೇಶ ಪರಪ್ಪನವರ ಇದ್ದರು.
Published on
ಹಾನಗಲ್ಲ: ತಾಲೂಕಿನ ರೆತರಿಗೆ ಪ್ರಸಕ್ತ ಸಾಲಿನ ಬೆಳೆ ವಿಮೆ ನೋಂದಣಿ ಮಾಡುವುದು, ವಿಮಾ ಪರಿಹಾರ ಪಡೆಯುವಲ್ಲಿ ಇರುವ ನ್ಯೂನ್ಯತೆ  ಸರಿಪಡಿಸುವಂತೆ ರೆತ ಸಂದ ಪದಾಧಿಕಾರಿಗಳು ತಹಸೀಲ್ದಾರ್​ ವಿಠ್ಠಲ ಚೌಗಲಾ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಪ್ರಸಕ್ತ ಸಾಲಿನಲ್ಲಿ ಬೆಳೆ ವಿಮೆ ನೋಂದಣಿ ಮಾಡುವಲ್ಲಿ ರೆತರಿಗೆ ಸಾಲಗಾರರು, ಸಾಲಗಾರರಲ್ಲದವರು ಎಂದು ವಿಂಗಡಿಸಿ ಸ್ವಯಂ ದಢೀಕರಣ ಸಲ್ಲಿಸುವುದರಲ್ಲಿನ ಗೊಂದಲ ನಿವಾರಿಸಬೇಕು. 2025&26ನೇ ಸಾಲಿನ ಶುಂಠಿ, ಹಸಿಮೆಣಸಿನಕಾಯಿ, ಅಡಿಕೆ ಮತ್ತು ಮಾವು ಬೆಳೆ ವಿಮಾ ಪರಿಹಾರದ ಅವಧಿ ಮುಕ್ತಾಯವಾಗಿ 9 ತಿಂಗಳು ಕಳೆದರೂ ವಿಮಾ ಪರಿಹಾರ ಬಿಡುಗಡೆಯಾಗಿಲ್ಲ. ಬೆಳೆ ವಿಮೆ ಕಂತು ತುಂಬುವ ಕುರಿತು ಅಂತಿಮ ದಿನಾಂಕವನ್ನು ನಿಗದಿ ಮಾಡಿರುವ ಹಾಗೇ ಪರಿಹಾರ ಹಣವನ್ನು ರೆತರ ಖಾತೆಗೆ ಜಮಾ ಮಾಡಲು ದಿನಾಂಕ ನಿಗದಿ ಮಾಡಬೇಕು. 2019ನೇ ಸಾಲಿನಲ್ಲಿ ಬೆಳೆಹಾನಿ ಪರಿಹಾರ ವಿತರಣೆಯಲ್ಲಿ ಕೆಲ ಗ್ರಾಮ ಆಡಳಿತಾಧಿಕಾರಿಗಳು ಮತ್ತು ಗ್ರಾಮ ಸಹಾಯಕರ ತಪ್ಪಿನಿಂದ ಆಗಿರುವ ಸಮಸ್ಯೆ ಪೊಲೀಸ್​ ತನಿಖೆಯಿಂದ ಇತ್ಯರ್ಥವಾಗಿದೆ. ಕೂಡಲೇ ಸಂಬಂಧಿಸಿದ ರೆತರ ಖಾತೆಗೆ ಪರಿಹಾರ ಜಮಾ ಮಾಡಬೇಕು. ಬಾಳಂಬೀಡ ಏತ ನೀರಾವರಿ ಯೋಜನೆಯಿಂದ ಕೆರೆ ತುಂಬಿಸುವ ಕಾರ್ಯ ಆರಂಭಿಸಬೇಕು. ತಾಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಕೂಡಲೇ ಬರಪೀಡಿತ ತಾಲೂಕು ಎಂದು ೂಷಿಸಿ ರೆತರಿಗೆ ಬೆಳೆಹಾನಿ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ರೆತ ಸಂ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದಶಿರ್ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಸರ್ಕಾರ ಈಗ ನೀಡಿರುವ ಸ್ವಯಂ ದೃಢೀಕರಣ ಪತ್ರದಲ್ಲಿ ಸುಸ್ತಿದಾರ ರೆತನಿಗೆ ಪ್ರಸಕ್ತ ಸಾಲಿನ ಬೆಳೆವಿಮೆ ಯೋಜನೆಯಲ್ಲಿ ನೋಂದಣಿ ಮಾಡಲು ಕಷಿ ಮತ್ತು ಲೀಡ್​ ಬ್ಯಾಂಕ್​ ವ್ಯವಸ್ಥಾಪಕರು ಸಾಲಗಾರರಲ್ಲವೆಂದು ದಾಖಲಿಸುವಂತೆ ಮೌಖಿಕವಾಗಿ ಸೂಚಿಸಿದ್ದಾರೆ. ಸುಸ್ತಿದಾರನು ದಢೀಕರಣ ಪತ್ರದಲ್ಲಿ ಸಾಲಗಾರನಲ್ಲ ಎಂದು ದಾಖಲಿಸಿದರೆ ಮುಂದೆ ವಿಮಾ ಕಂಪನಿಯಿಂದ ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ ಸರ್ಕಾರ ಇಂಥ ಸುಸ್ತಿದಾರ ರೆತರಿಗೆ ಯಾವ ರೀತಿಯಲ್ಲಿ ವಿಮಾ ನೋಂದಣಿ ಮಾಡಬೇಕೆಂಬ ಕುರಿತು ನಿರ್ದೇಶನ ನೀಡಬೇಕು ಎಂದರು.
ಸಂದ ಜಿಲ್ಲಾ ಉಪಾಧ್ಯ ಅಡಿವೆಪ್ಪ ಆಲದಕಟ್ಟಿ, ತಾಲೂಕಾಧ್ಯ ಮರಿಗೌಡ ಪಾಟೀಲ, ಸೋಮಣ್ಣ ಜಡೆಗೊಂಡರ, ಕಾರ್ಯದಶಿರ್ ರುದ್ರಪ್ಪ ಹಣ್ಣಿ, ಶಿವಯೋಗಿ ಹೊಸಗೌಡ್ರ, ಮಾಲತೇಶ ಪರಪ್ಪನವರ ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net