ಶಿಕ್ಷಣದಿಂದ ಸರ್ವತೋಮುಖ ಅಭಿವೃದ್ಧಿ

ಬ್ಯಾಡಗಿ ತಾಲೂಕಿನ ತಾಲೂಕಿನ ಅಂಗರಗಟ್ಟಿ ಗ್ರಾಮದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ಪ್ರಾಥಮಿಕ ಶಾಲೆಯ ನೂತನ ಕೊಠಡಿ ನಿರ್ಮಾಣಕ್ಕೆ ಶಾಹೀ ಎಕ್ಸ್‌ಪೋರ್ಟ್ ವ್ಯವಸ್ಥಾಪಕ ರವಿಕುಮಾರ ಭೂಮಿಪೂಜೆ ನೆರವೇರಿಸಿದರು.
ಬ್ಯಾಡಗಿ ತಾಲೂಕಿನ ತಾಲೂಕಿನ ಅಂಗರಗಟ್ಟಿ ಗ್ರಾಮದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ಪ್ರಾಥಮಿಕ ಶಾಲೆಯ ನೂತನ ಕೊಠಡಿ ನಿರ್ಮಾಣಕ್ಕೆ ಶಾಹೀ ಎಕ್ಸ್‌ಪೋರ್ಟ್ ವ್ಯವಸ್ಥಾಪಕ ರವಿಕುಮಾರ ಭೂಮಿಪೂಜೆ ನೆರವೇರಿಸಿದರು.
Published on
ಬ್ಯಾಡಗಿ: ಶಿಕ್ಷಣದಿಂದ ದೇಶದ ಸರ್ವತೋಮುಖ ಅಭಿವೃದ್ಧಿಯೊಂದಿಗೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಶಾಹೀ ಎಕ್ಸ್‌ಪೋರ್ಟ್ ಲಿಮಿಟೆಡ್ ವ್ಯವಸ್ಥಾಪಕ ಟಿ. ರವಿಕುಮಾರ ಹೇಳಿದರು.
ಶಾಹೀ ಎಕ್ಸ್‌ಪೋರ್ಟ್ ವತಿಯಿಂದ 40 ಲಕ್ಷ ರೂ. ವೆಚ್ಚದಲ್ಲಿ ತಾಲೂಕಿನ ಅಂಗರಗಟ್ಟಿ ಗ್ರಾಮದ ಪ್ರಾಥಮಿಕ ಶಾಲೆಯ 4 ಕೊಠಡಿ ಹಾಗೂ ಕಾಂಪೌಂಡ್ ನಿರ್ಮಾಣಕ್ಕೆ ಗುರುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಎಲ್ಲ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಸರ್ಕಾರಗಳು ಸಾಕಷ್ಟು ಯತ್ನ ನಡೆಸಿವೆ. ಈ ನಿಟ್ಟಿನಲ್ಲಿ ಬ್ಯಾಡಗಿ ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಹೀ ಎಕ್ಸ್‌ಪೋರ್ಟ್ ಸಾವಿರಾರು ಜನರಿಗೆ ಉದ್ಯೋಗ ನೀಡುವ ಜತೆಗೆ ಶಿಕ್ಷಣ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳಿಗೆ ಸಹಕಾರ ನೀಡಿದೆ ಎಂದರು.
ಗ್ರಾಮಸ್ಥರು ಹಾಗೂ ಶಿಕ್ಷಕರು ಕೋರಿಕೆ ಹಾಗೂ ಸಂಸ್ಥೆ ಸಾಮಾಜಿಕ ಕಳಕಳಿಯ ಹಿನ್ನೆಲೆಯಿಂದ ನೂತನ ಶಾಲಾ ಕೊಠಡಿ ನಿರ್ಮಿಸಲು ಅನುದಾನ ನೀಡಿದ್ದೇವೆ. ಗುಣಮಟ್ಟದ ಕಟ್ಟಡದ ಜತೆಗೆ ಹೈಟೆಕ್ ಮಾದರಿಯ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ ಮಾತನಾಡಿ, ತಾಲೂಕಿನ ಚಿನ್ನಿಕಟ್ಟಿ, ಕೆರೂಡಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಖಾಸಗಿ ಸಂಸ್ಥೆಯವರು ಹಾಗೂ ಕದರಮಂಡಲಗಿ ಗ್ರಾಮದಲ್ಲಿ ಹಳೆಯ ವಿದ್ಯಾರ್ಥಿಗಳು ಶಾಲಾ ಕಟ್ಟಡಕ್ಕೆ ಸಹಕಾರ ನೀಡಿದ್ದಾರೆ. ಸಂಘ-ಸಂಸ್ಥೆಗಳು ಗಣ್ಯ ವ್ಯಾಪಾರಸ್ಥರು ಸಹಕಾರ ನೀಡಿದಲ್ಲಿ ಗ್ರಾಮೀಣ ಶಾಲೆಗಳನ್ನು ಅಭಿವೃದ್ಧಿಪಡಿಸಲು ಕೈಜೋಡಿಸಿದಲ್ಲಿ ಗುಣಮಟ್ಟದ ಶಿಕ್ಷಣ ಸಾಧ್ಯವಾಗಲಿದೆ ಎಂದರು.
ಅಕ್ಷರ ದಾಸೋಹ ನಿರ್ದೇಶಕ ವಸಂತ ಚಿಕ್ಕಣ್ಣನವರ, ಮುಖ್ಯಶಿಕ್ಷಕಿ ಕವಿತಾ ಆರ್., ಶಿಕ್ಷಕರಾದ ಜಿ.ಎಸ್. ಬಡ್ಡಿಯವರ, ಐ.ಆರ್. ತಳಗೇರಿ, ಪಿ.ಎನ್. ನೆಲೋಗಲ್ಲ, ಪಿ.ಎಲ್. ನೆಲೋಗಲ್ಲ, ವಿರೇಶ ಕಡಕೋಶಿ, ಎಂ. ರಾಘವೇಂದ್ರ, ಮಂಜುನಾಥ ಬಡಿಗೇರ, ಮಾಜಿ ಗ್ರಾಪಂ ಸದಸ್ಯ ಶೇಖಪ್ಪ ಅಳಲಗೇರಿ, ಯಶೋದಾ ಕಮತರ, ರೇಣುಕಾ ತಗಡಿನಮನಿ, ಎಸ್.ಎಸ್. ಅಳಲಗೇರಿ, ಎಸ್‌ಡಿಎಂಸಿ ಅಧ್ಯಕ್ಷ ಹೊನ್ನಪ್ಪ ಉದ್ದಿನಕೇರಿ, ಉಪಾಧ್ಯಕ್ಷೆ ನೀಲಾ ಮಲ್ಲಾಡದ, ಹನುಮಂತಪ್ಪ ಗಬಗಡಿ, ಶಿವಪುತ್ರಪ್ಪ ಮಾಸಣಗಿ, ಹನುಮಂತಪ್ಪ ಅಳಲಗೇರಿ, ನಾಗಪ್ಪ ಅಳಲಗೇರಿ, ಜಗದೀಶ ತಗಡಿನಮನಿ, ಶಿವಲಿಂಗಯ್ಯ ಹಿರೇಮಠ, ಶೇಖಪ್ಪ ಹಾದಿಮನಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net