Administration building ಆಡಳಿತ ಸೌಧ ಉದ್ಘಾಟನೆ ಶೀಘ್ರ

Administration building
Administration building
Published on
ಬ್ಯಾಡಗಿ: ತಾಲೂಕಿನ ಜನರ ಬಹುದಿನಗಳ ಕನಸಾಗಿರುವ ಆಡಳಿತ ಸೌಧ (Administration building) ಕಾಮಗಾರಿ ಭರದಿಂದ ಸಾಗಿದ್ದು, ಉದ್ಘಾಟನೆ ಸನ್ನದ್ಧವಾಗುತ್ತಿದೆ. ಈ ಮೂಲಕ ಆಡಳಿತಯಂತ್ರಕ್ಕೆ ಶಕ್ತಿ ಬರಲಿದೆ.  
ಸಾರ್ವಜನಿಕರಿಗೆ ಒಂದೇ ಸಮುಚ್ಚಯದಲ್ಲಿ ಆಡಳಿತ ಕೇಂದ್ರಗಳು ಕಾರ್ಯನಿರ್ವಹಿಸಬೇಕೆಂಬ ಉದ್ದೇಶದಿಂದ ಸುಮಾರು 15 ವರ್ಷಗಳ ಹಿಂದೆ ಪಟ್ಟಣದಲ್ಲಿ ಮಿನಿವಿಧಾನಸೌಧ (ತಹಸೀಲ್ದಾರ್​ ಕಚೇರಿ) ನಿರ್ಮಾಣವಾಗಿದೆ. ಆದರೆ, ಎಲ್ಲ ಇಲಾಖೆ ಕಚೇರಿಗಳಿಗೆ ಕೊಠಡಿ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕಂದಾಯ ನಿರೀಕ್ಷಕರು, ಪಡಿತರ ವಿಭಾಗ, ಚುನಾವಣೆ ಕಚೇರಿ, ಭೂಮಿ ಕೇಂದ್ರ, ಭೂಮಾಪನ, ಸಿಟಿ ಸರ್ವೇ ಸೇರಿದಂತೆ ಕೆಲ ಪ್ರಮುಖ ಅಧಿಕಾರಿಗಳಿಗೆ ಮಾತ್ರ ಕೊಠಡಿ ನೀಡಿದ್ದು, ಉಳಿದ ಇಲಾಖೆಗಳು ಹೊರಗುಳಿದು ಹಳೆಯ ತಹಸೀಲ್ದಾರ್​ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದವು.
ಇದು ಬ್ರಿಟಿಷ್​ ಕಾಲದ ಅವಧಿಯಲ್ಲಿ ನಿಮಿರ್ಸಿದ್ದು, ರ್ಪೂಣಪ್ರಮಾಣದಲ್ಲಿ ಶಿಥಿಲಾ ವ್ಯವಸ್ಥೆ ತಲುಪಿ, ನೌಕರರು, ಸಾರ್ವಜನಿಕರು ಅಪಾಯದಲ್ಲಿ ಕಾಲಕಳೆಯುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಹಿಂದಿನ ಸರ್ಕಾರ 2023ರಲ್ಲಿ 10 ಕೋಟಿ ರೂ. ವೆಚ್ಚದ ಕಟ್ಟಡಕ್ಕೆ ಮಂಜೂರಾತಿ ನೀಡಿತ್ತು. ಈಗ ಕಟ್ಟಡ ಬಹುತೇಕ ರ್ಪೂಣಗೊಂಡು ಉದ್ಘಾಟನೆಗೆ ಕಾಯಲಾಗುತ್ತಿದೆ.
ವೆಚ್ಚ, ಸಮಯ ಉಳಿತಾಯ: ಒಂದೇ ಆವರಣದ ಬೃಹತ್​ ಕಟ್ಟಡದಲ್ಲಿ ಎಲ್ಲ ಕಚೇರಿಗಳು ಕಾರ್ಯನಿರ್ವಹಿಸುವುದರಿಂದ ಅಧಿಕಾರಿ, ಸಿಬ್ಬಂದಿಗಳಿಗೆ ತ್ವರಿತಗತಿಯ ಸೇವೆ ಹಾಗೂ  ಸಾರ್ವಜನಿಕರಿಗೆ ಸಮಯ, ವೆಚ್ಚಗಳ ಉಳಿತಾಯ ಹಾಗೂ ಸರ್ಕಾರಕ್ಕೂ ಆಥಿರ್ಕ ಹೊರೆ ತಗ್ಗಲಿದೆ. 
ಮುಖ್ಯವಾಗಿ ಶಿಶು ಯೋಜನಾಧಿಕಾರಿಗಳ ಕಚೇರಿ, ಅಲ್ಪಸಂಖ್ಯಾತ ಸಹಾಯಕ ನಿರ್ಧೆಶಕರು, ಹಿಂದುಳಿದ ವರ್ಗಗಳ ಸಹಾಯಕ ನಿರ್ದೇಶಕರು, ೇತ್ರ ಶಿಕ್ಷಣಾಧಿಕಾರಿಗಳು, ರೇಷ್ಮೆ ವಿಸ್ತರ್ಣಾಧಿಕಾರಿಗಳು, ಕೃಷಿ ಸಹಾಯಕ ನಿರ್ದೇಶಕರ ಕಾರ್ಯಾಲಯ, ಕಾಮಿರ್ಕ ಇಲಾಖೆ, ಉಪನೋಂದಣಾಧಿಕಾರಿ, ಕಂದಾಯ ನಿರೀಕ್ಷಕರ, ಗ್ರಾಮ ಆಡಳಿತಾಧಿಕಾರಿಗಳ ಕಚೇರಿ, ಆಹಾರ ನಿರೀಕ್ಷಕರು ಸೇರಿದಂತೆ 13 ಹೆಚ್ಚು ಕಚೇರಿಗಳು ಆಡಳಿತ ಸೌಧದಲ್ಲಿ ಕಾರ್ಯನಿರ್ವಹಿಸಲಿವೆ.
ಹೈಟೆಕ್​ ಕಟ್ಟಡ: ಬೃಹತ್​ ಕಟ್ಟಡದಲ್ಲಿ ಮುಖ್ಯವಾಗಿ ಎಲ್ಲ ಕಚೇರಿಗಳಿಗೆ ಪ್ರತ್ಯೇಕ ಕೊಠಡಿಗಳಿವೆ. ಒಳಾಂಗಣದಲ್ಲಿ ಕಚೇರಿಗಳಿಗೆ ರ್ಪೂಣಪ್ರಮಾಣದಲ್ಲಿ ಬೆಳಕಿನ ವ್ಯವಸ್ಥೆಯಿದೆ. ಮಧ್ಯಭಾಗದಲ್ಲಿ ಮೇಲಧಿಕಾರಿಗಳು, ಶಾಸಕರು, ಮಂತ್ರಿಗಳು ಆಗಮಿಸಿ ಸಭೆ ನಡೆಸಲು ಹಾಗೂ ಜಯಂತ್ಯುತ್ಸವ, ಸಭೆ, ಸಮಾರಂಭ ನಡೆಸಲು ಸುಸಜ್ಜಿತ ಸಭಾಂಗಣ ನಿಮಿರ್ಸಲಾಗಿದೆ.
ಕಟ್ಟಡಕ್ಕೆ ಪ್ರತ್ಯೇಕವಾಗಿ ಕೊಳವೆ ಬಾವಿ ಕೊರೆಸಿದ್ದು, ನೀರಿನ ಸೌಲಭ್ಯ ಒದಗಿಸಿದೆ. ಹೊರಭಾಗದ ಕಟ್ಟಡದ ಸುತ್ತಲೂ ಪೇವರ್ಸ್​ ಅಳವಡಿಸಿದೆ. ಸರ್ಕಾರಿ ವಾಹನ, ಸಿಬ್ಬಂದಿ, ಸಾರ್ವಜನಿಕರ ವಾಹನಗಳನ್ನು ನಿಲ್ಲಿಸಲು ಪಾಕಿರ್ಂಗ್​ ವ್ಯವಸ್ಥೆಯಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net