providing-work ಕೂಲಿಕಾರರಿಗೆ ಕೆಲಸ ನೀಡಲು ನಿರ್ಲಕ್ಷ್ಯ ತೋರಿದರೆ ಕ್ರಮ
ಬ್ಯಾಡಗಿ ತಾಲೂಕಿನ ಬಿಸಲಹಳ್ಳಿ ಗ್ರಾಮದ ಹುಲಿಕಟ್ಟಿ ಕೆರೆ ಹೂಳೆತ್ತುವ ಕಾಮಗಾರಿ (providing-work) ಸ್ಥಳಕ್ಕೆ ಜಿಲ್ಲಾ ಪಂಚಾಯತಿ ಸಿಇಒ ದಲ್ಜಿತ್ ಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬ್ಯಾಡಗಿ: ಬರಗಾಲದ ಛಾಯೆ ಎಲ್ಲೆಡೆ ಆವರಿಸಿದ್ದು, ಕೂಲಿ ಕಾರ್ವಿುಕರು ಗುಳೆ ಹೋಗದಂತೆ ಕೆಲಸ ಒದಗಿಸುವ (providing-work) ಜವಾಬ್ದಾರಿ ಗ್ರಾಮ ಪಂಚಾಯತಿ ಮೇಲಿದೆ. ಅಭಿವೃದ್ಧಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದಲ್ಲಿ ಕ್ರಮ ನಿಶ್ಚಿತ ಎಂದು ಜಿಪಂ ಸಿಇಒ ದಲ್ಜಿತ್ಕುಮಾರ ಎಚ್ಚರಿಸಿದರು.
ತಾಲೂಕಿನ ಬಿಸಲಹಳ್ಳಿ ಗ್ರಾಮದ ಹುಲಿಕಟ್ಟಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಜು. 1ರಿಂದ ದೇಶಾದ್ಯಂತ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಆಂಡ್ ಆಜೀವಿಕ ಮಿಷನ್ ಜಾರಿಗೆ ಬಂದಿದೆ. ಗ್ರಾಮೀಣ ಪ್ರದೇಶದ 18 ವರ್ಷ ಮೇಲ್ಪಟ್ಟ ಕೂಲಿ ಕಾರ್ವಿುಕರು ತಮ್ಮ ಹೆಸರು ನೋಂದಾಯಿಸಿಕೊಂಡು ಉದ್ಯೋಗ ಚೀಟಿ ಪಡೆಯಬಹುದಾಗಿದೆ. ಒಂದು ಕುಟುಂಬಕ್ಕೆ 125 ದಿನ ಮಾನವ ದಿನ ಕೆಲಸ ನಿಗದಿಪಡಿಸಲಾಗಿದೆ ಎಂದರು.
ಯೋಜನೆ ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಯೋಜನೆ ಮೇಲ್ವಿಚಾರಕರು ವಿಶೇಷ ಕಾಳಜಿ ತೋರಬೇಕು. ಮಳೆ ಕೊರತೆಯಿರುವ ಪರಿಣಾಮ ಕೂಲಿಕಾರರರು ಕೃಷಿ ಕೆಲಸ ಇಲ್ಲದೆ ಖಾಲಿಯಿದ್ದಾರೆ. ಎಲ್ಲೆಲ್ಲಿ ಅಗತ್ಯವಿದೆಯೋ ಅಂತಹ ಸ್ಥಳಗಳಲ್ಲಿ ಕಾಮಗಾರಿ ಆರಂಭಿಸಿ, ಕೂಲಿಕಾರರಿಗೆ ಕೆಲಸ ಒದಗಿಸಬೇಕು. ಅರ್ಜಿ ಸಲ್ಲಿಸಿದ ಬಳಿಕ ಕೆಲಸ ನೀಡದಿದ್ದಲ್ಲಿ ಕಾಯ್ದೆಯಂತೆ ನಿರುದ್ಯೋಗ ಭತ್ಯೆಗೆ ಅವರು ಅರ್ಹರಾಗಲಿದ್ದಾರೆ. ರೈತರು ತಮ್ಮ ಜಮೀನುಗಳಲ್ಲಿ ಕಾಮಗಾರಿ ಕೈಗೊಳ್ಳಲು ಅರ್ಜಿ ಸಲ್ಲಿಸಿದಲ್ಲಿ, ನಿಯಮದಂತೆ ಕೂಡಲೇ ಅವಕಾಶ ಕಲ್ಪಿಸಿ ಎಂದು ಸೂಚಿಸಿದರು.
ತಾಪಂ ಇಒ ಕೆ.ಎಂ. ಮಲ್ಲಿಕಾರ್ಜುನ ಮಾತನಾಡಿ, ಒಂದು ದಿನದ ಕೂಲಿ 382 ರೂ. ಹೆಚ್ಚಿಸಲಾಗಿದೆ. ಕಾಯಕಬಂಧುಗಳು ಕೂಲಿಕಾರರಿಗೆ ದೊರಕುವ ಸೌಲಭ್ಯಗಳ ಮಾಹಿತಿ ನೀಡಬೇಕು. ಸಕಾಲಕ್ಕೆ ಕೂಲಿ ನಿರ್ವಹಿಸಲು ಅವಕಾಶ ಕಲ್ಪಿಸಿಕೊಟ್ಟು ಕೂಲಿಕಾರರು ಗುಳೆ ಹೋಗದಂತೆ ತಡೆಯಬೇಕು ಎಂದರು.
ಪಿಡಿಒ ಶಿವಾನಂದ ಕುಬಟೂರ, ತಾಂತ್ರಿಕ ಸಹಾಯಕ ಪ್ರದೀಪ ದೇಸಳ್ಳಿ, ಮಾಹಿತಿ ಶಿಕ್ಷಣ ಸಂಯೊಜಕ ಅಕ್ಷಯ ದೇಶಪಾಂಡೆ, ಹನುಮಗೌಡ್ರ ಕೋಣನತೆಲೆ, ಗ್ರಾಮ ಕಾಯಕಮಿತ್ರ ಲಲಿತಾ ಹೊಸಮನಿ, ಶಿವಾನಂದ ಡಿ., ಕಾಯಕಬಂಧುಗಳು ಹಾಗೂ ಗ್ರಾಪಂ ಸಿಬ್ಬಂದಿ ಇತರರಿದ್ದರು.