hunger strike ನೀಟ್​ ಲೋಪಗಳ ವಿರುದ್ಧ 21 ಜನರಿಂದ ಉಪವಾಸ ಸತ್ಯಾಗ್ರಹ

hunger strike
hunger strike
Published on
ಹಾನಗಲ್ಲ: ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಶೈಣಿಕ ವ್ಯವಸ್ಥೆಯ ಲೋಪಗಳ ವಿರುದ್ಧ ಜು. 23ರಂದು ಪಟ್ಟಣದಲ್ಲಿ 21 ಜನ ಉಪವಾಸ ಸತ್ಯಾಗ್ರಹದ (hunger strike) ಮೂಲಕ ಪ್ರತಿಭಟನೆಗೆ ಇಳಿಯುತ್ತಿದ್ದಾರೆ.
ಗುರುವಾರ ಬೆಳಗ್ಗೆ 10 ಗಂಟೆಗೆ ಇಲ್ಲಿನ ಮಹಾತ್ಮ ಗಾಂಧಿ ವೃತ್ತದ ಕನಕದಾಸ ಪ್ರತಿಮೆ ಎದುರು ಸಂಜೆ 6 ಗಂಟೆವರೆಗೆ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಬಡ, ಮಧ್ಯಮ ವರ್ಗದ 21 ನೀಟ್​ ಆಕಾಂತ ವಿದ್ಯಾಥಿರ್ಗಳು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಹಾನಗಲ್ಲಿನಲ್ಲಿ 21ಕ್ಕೂ ಅಧಿಕ ಅನೇಕ ಜನರು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ.
ಮೃತ 21 ವಿದ್ಯಾಥಿರ್ಗಳಿಗೆ ತಲಾ ಒಂದು ಕೋಟಿ ರೂಪಾಯಿ ಪರಿಹಾರ, ಕೇಂದ್ರ ಶಿಣ ಸಚಿವ ಧಮೇರ್ಂದ್ರ ಪ್ರಧಾನ್​ ರಾಜೀನಾಮೆ, ನೀಟ್​ ಹಗರಣದ ತಪ್ಪಿತಸ್ಥರನ್ನು ಗಲ್ಲಿಗೇರಿಸುವ ಬೇಡಿಕೆ ಹಾಗೂ ಪ್ರತಿಭಟನಾನಿರತ ವಿದ್ಯಾಥಿರ್ಗಳ ಮೇಲೆ ಕೇಂದ್ರ ಸರ್ಕಾರ ಲಾಠಿ ಪ್ರಹಾರ, ಟಯರ್​ ಗ್ಯಾಸ್​ ಪ್ರಯೋಗ, ಬಲಪ್ರಯೋಗ ಹಾಗೂ ಪೂರ್ವ ಪ್ರಾಯೋಜಿತ ದಾಳಿ ನಡೆಸಿರುವುದು ಖಂಡಿಸಿ ಉಪವಾಸ ಸತ್ಯಾಗ್ರಹ ಮಾಡುತ್ತಿರುವುದಾಗಿ ಹಾನಗಲ್ಲ ತಾಲೂಕು ಶೈಣಿಕ ಹೋರಾಟ ಸಮಿತಿ ಪ್ರಕಟಿಸಿದೆ.
ತಾಲೂಕಿನ ಪ್ರಶಾಂತ ಮುಚ್ಚಂಡಿ, ಮಂಜುನಾಥ ಕರ್ಜಗಿ, ವಿಜಯಕುಮಾರ ದೊಡ್ಡಮನಿ, ೈರೋಜ್​ ಶಿರಬಡಗಿ, ಗುರುರಾಜ ನಿಂಗೋಜಿ, ವಿನಯ ಬಂಕನಾಳ, ಮಾರುತಿ ಹಂಜಗಿ, ಸಿಕಂದರ್​ ವಾಲಿಕಾರ, ಸಂತನುಕುಮಾರ ದೊಡ್ಡಮನಿ, ಲಿಂಗರಾಜ ಮಡಿವಾಳರ, ಅಣ್ಣಪ್ಪ ಚಿಕ್ಕಣ್ಣನವರ, ಜಿಲಾನಿಖಾನ್​ ಮುಲ್ಲಾ, ಮುಕ್ತಾನಂದ ಹಿರೇಮನಿ, ಆರ್​.ಎ್​. ತಿರುಮಲೆ, ಸಿ. ಮಂಜುನಾಥ, ಅಶೋಕ ದಾಸರ, ಶಿವು ಭದ್ರಾವತಿ, ಶಿವು ತಳವಾರ, ಕೀರೇಶ ಗೌಡಳ್ಳಿ, ಮುಲ್ಲಾ ಇತರರು ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net