ಜಿಲ್ಲಾಮಟ್ಟದ ಯುವಜನೋತ್ಸವ ಸ್ಪರ್ಧೆಗಳ ಫಲಿತಾಂಶ ಪ್ರಕಟ

Published on

ಹಾವೇರಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನೆಹರು ಯುವ ಕೇಂದ್ರ ಹಾಗೂ ಹಾವೇರಿಯ ಜಿ.ಎಚ್.ಕಾಲೇಜ್ ಸಹಯೋಗದಲ್ಲಿ ನ.26ರಂದು ಜಿಎಚ್ ಕಾಲೇಜ್ ಸಭಾಂಗಣದಲ್ಲಿ ಜರುಗಿದ 2024-25ನೇ ಸಾಲಿನ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಕಲಾವಿದರ ಫಲಿತಾಂಶ ಬಿಡುಗಡೆಗೊಳಿಸಲಾಗಿದೆ.

ಜನಪದ ನೃತ್ಯ ಗುಂಪು ಸ್ಪರ್ಧೆಯಲ್ಲಿ ಗಣೇಶ ಮಳ್ಳಳ್ಳಿ ಪ್ರಥಮ, ಸೌಜನ್ಯ ದೊಡಮನಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಜನಪದ ಗೀತೆ ಗುಂಪು ಸ್ಪರ್ಧೆಯಲ್ಲಿ ರೇಣುಕಾ ನೆಲ್ಲೂರು ಪ್ರಥಮ, ದೀಪಾ ಡಿ.ಕೆ. ದ್ವಿತೀಯ ಸ್ಥಾನ ಪಡೆಕೊಂಡಿದ್ದಾರೆ. ಜನಪದ ನೃತ್ಯ ವೈಯಕ್ತಿಕ ಸ್ಪರ್ಧೆಯಲ್ಲಿ ಅರುಣ ಹಳಬಣ್ಣವರ ಪ್ರಥಮ, ಭೂಮಿಕಾ ಎಚ್., ರಜಪೂತ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಕವಿತೆ ಬರೆಯುವ ಸ್ಪರ್ಧೆಯಲ್ಲಿ ಭಾಗ್ಯವತಿ ದೇಶಪಾಂಡೆ ಪ್ರಥಮ, ಕಾವ್ಯ ಸಾಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಕಥೆ ಬರೆಯುವ ಸ್ಪರ್ಧೆಯಲ್ಲಿ ರೇಣುಕಾ ಎಸ್. ಪ್ರಥಮ, ಪ್ರೇಮಾ ಕೆ. ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಚಿತ್ರಕಲೆಯಲ್ಲಿ ದರ್ಶನ ಬಿ. ಪ್ರಥಮ, ಮನೋಜ್ ಎಸ್.ಎಸ್. ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಘೋಷಣೆ ಸ್ಪರ್ಧೆಯಲ್ಲಿ ಮನ್ಸೂರ್ ಅಲಿ ಜೆ. ಪ್ರಥಮ, ಸಾಧಿಕ್ ಅಹ್ಮದ್ ನದಾಫ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಗುಡಿ ಕೈಗಾರಿಕೆಯ ಕಲಾ ಪ್ರಕಾರ ವಿಭಾಗದಲ್ಲಿ ಆಕಾಶ ಮುಂಡರಗಿ ಪ್ರಥಮ, ತುಷಾರ ಶೆಟ್ಟಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ನೇಕಾರಿಕೆ ಜವಳಿ ವಿಭಾಗದಲ್ಲಿ ಚಂದನಾ ಎಚ್. ಪ್ರಥಮ, ಜ್ಯೋತಿ ಜಿ. ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಕೃಷಿ ಉತ್ಪನ್ನ ವಿಭಾಗದಲ್ಲಿ ವಿನೋದ ಎನ್. ಪ್ರಥಮ, ವಿರೇಶ ಜಿ. ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಲತಾ ಬಿ.ಎಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net