ಯತ್ತಿನಹಳ್ಳಿ ಶಾಲೆಯ ನೂತನ ಎಸ್‌ಡಿಎಂಸಿ ರಚನೆ

17 HVR 5
Published on

ಹಾವೇರಿ: ತಾಲೂಕಿನ ಯತ್ತಿನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ)ಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಅಣ್ಣಪ್ಪ ಹನುಮಂತಪ್ಪ ದೇಸಳ್ಳಿ ಹಾಗೂ ಉಪಾಧ್ಯಕ್ಷರಾಗಿ ಲತಾ ಮೃತ್ಯುಂಜಯ ಬಾಳಿಕಾಯಿ ಆಯ್ಕೆಯಾದರು. ಸದಸ್ಯರಾಗಿ ಸಂಜೀವಕುಮಾರ ಜಂಪಣ್ಣನವರ, ಸುರೇಶ ಸೋಮಣ್ಣನವರ, ಶಿವಬಸಪ್ಪ ಬಾಳಿಕಾಯಿ, ಲಿಂಗರಾಜ ಗುತ್ತಲ, ಮಹದೇವಪ್ಪ ಹರಿಜನ, ಗುಡ್ಡಪ್ಪ ಹರಿಜನ, ಮಂಜು ಹರಿಜನ, ಹುಸೇನಮಿಯಾ ವಾಲಿಕಾರ, ಲಕ್ಷ್ಮೀ ತೋಟಗೇರ, ನಿರ್ಮಲ ಜಕ್ಕಣ್ಣನವರ, ನೇತ್ರಾ ಹಾವೇರಿ, ವಿಜಯಲಕ್ಷ್ಮೀ ಗುತ್ತಲ, ಗದಿಗೆವ್ವ ಜೆಲ್ಲಿ, ಕುಸುಮ ಹರಿಜನ, ಸರಸ್ವತಿ ಹರಿಜನ, ಭಾಗ್ಯಶ್ರೀ ಹರಿಜನ ಆಯ್ಕೆಯಾಗಿದ್ದಾರೆ.
ಎಸ್‌ಡಿಎಂಸಿ ರಚನೆಯ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ವೀರಣ್ಣ ಕಳ್ಳಿಹಾಳ, ಉಪಾಧ್ಯಕ್ಷೆ ಜಯಶ್ರೀ ಚಿಗರಿ, ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಕಾಂತ ದೊಡ್ಡಕುರುಬರ, ಅಶೋಕ ಮಜ್ಜಗಿ, ಪರಸನಗೌಡ ಪಾಟೀಲ, ಪ್ರಕಾಶ ಮಜ್ಜಗಿ, ಕುಮಾರ ಹರಿಜನ, ಸುಮಂಗಲ ಪೋರಾಪುರ, ಫಕ್ಕೀರೇಶ ಹರಿಜನ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net