ಜನ ಸಾಮಾನ್ಯರ ಸಂಗಾತಿ ಸೈಕಲ್; ವಿಶ್ವ ಸೈಕಲ್ ದಿನಾಚರಣೆಯಲ್ಲಿ ಡಾ.ಸುದೀಪ ಪಂಡಿತ ಹೇಳಿಕೆ

3 Cycle day
Published on

ಹಾವೇರಿ ಆರೋಗ್ಯವನ್ನು ಗಳಿಸಲು, ಇಂಧನವನ್ನು ಉಳಿಸಲು ಸೈಕಲ್ ಅತ್ಯುತ್ತಮವಾದ ಜನಸಾಮಾನ್ಯರ ಸಂಗಾತಿಯಾಗಿದೆ. ಆದ್ದರಿಂದ ಮಕ್ಕಳಲ್ಲಿ ಸೈಕಲ್ ಪ್ರೀತಿಯನ್ನು ಬೆಳೆಸಬೇಕು. ಇಂದಿನ ಒತ್ತಡದ ಜೀವನ ವಿಧಾನದ ಬದಲಿಸಿಕೊಳ್ಳಲು ಪ್ರತಿಯೊಬ್ಬರೂ ಸೈಕಲ್ ಬಳಕೆ ಮಾಡಬೇಕು ಎಂದು ಗೆಳೆಯರ ಬಳಗದ ಅಧ್ಯಕ್ಷ ಡಾ.ಸುದೀಪ ಪಂಡಿತ ಹೇಳಿದರು.
ಇಲ್ಲಿಯ ಅಶ್ವಿನಿ ನಗರದ ಮಾಗಾವಿ ಚನ್ನಬಸಪ್ಪ ಪ್ರೌಢಶಾಲಾ ಆವರಣದಲ್ಲಿ ಶನಿವಾರ ಗೆಳೆಯರ ಬಳಗ ಮತ್ತು ಜ್ಞಾನಗಂಗಾ ಶಿಕ್ಷಣ ಸಮಿತಿ ಸಂಯುಕ್ತವಾಗಿ ವಿಶ್ವ ಸೈಕಲ್ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸ್ಲೋ ಸೈಕ್ಲಿಂಗ್ ಸ್ಪರ್ದೆಯಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಐಶಾರಾಮಿ ಜೀವನ ನಡೆಸುವ ವಿದೇಶಿಯರು ಕೂಡ ಸೈಕಲ್ ಬಳಕೆಗೆ ಪ್ರಥಮಾದ್ಯತೆ ನೀಡುತ್ತಿದ್ದಾರೆ. ಕೆಲವು ಕಂಪನಿಗಳು ಸೈಕಲ್ ಬಳಕೆ ಮಾಡುವ ನೌಕರರಿಗೆ ಹೆಚ್ಚಿನ ಸಂಬಳ ಕೊಡುತ್ತಾರೆ. ನಮ್ಮಲ್ಲಿಯೂ ಇಂತಹ ವಾತಾವರಣ ಸೃಷ್ಟಿಯಾಗಬೇಕು ಎಂದರು.
ಸ್ಲೋ ಸೈಕಲಿಂಗ್ ಸ್ಪರ್ಧೆಯಲ್ಲಿ ಒಟ್ಟು 37 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಮಿತಿಯ ಹಿರಿಯ ಸದಸ್ಯರಾದ ಸಿ.ಎಂ.ಪಟ್ಟಣಶೆಟ್ಟಿ, ಸತೀಶ ಕುಲಕರ್ಣಿ, ಮುಖ್ಯೋಪಾಧ್ಯಾಯೆ ಪುಷ್ಪಾವತಿ ಕೆರುಡಿ, ಕಾಂತೇಶ ಎ. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net