ಬಿಸಿಎಂ ಹಾಸ್ಟೆಲ್‌ಗೆ ದೀಢೀರ್ ಭೇಟಿ, ಪರಿಶೀಲನೆ

5 HVR 6
Published on

ಹಾವೇರಿ: ನಗರದ ಪಿಡಬ್ಲೂೃಡಿ ಕ್ವಾರ್ಟರ್ಸ್ ಬಳಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಮಂಗಳವಾರ ಸಂಜೆ ದಿಢೀರ್ ಭೇಟಿ ನೀಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌದರಿ ಮಕ್ಕಳ ಸಮಸ್ಯೆಗಳನ್ನು ಆಲಿಸಿದರು.

ವಸತಿ ನಿಲಯದಲ್ಲಿ ಊಟದ ಕೊಠಡಿ, ಸ್ವಚ್ಛತೆ, ಶುದ್ಧ ಕುಡಿಯುವ ನೀರು, ಬಿಸಿ ನೀರು, ಭದ್ರತೆ, ಇತರ ಮೂಲಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡರು. ವಸತಿ ನಿಲಯದ ವಾರ್ಡನ್ ಸರಿಯಾಗಿ ನೋಡಿಕೊಳ್ಳುತ್ತಾರಾ ? ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಾರಾ?, ಇಲ್ಲಿ ಎಲ್ಲವೂ ಚೆನ್ನಾಗಿದೆಯಾ ? ಎಂದು ಮಕ್ಕಳಿಂದ ಮಾಹಿತಿ ಪಡೆದುಕೊಂಡರು.

ಸರಿಪಡಿಸಲು ಸೂಚನೆ :

ಪ್ರತಿ ಜಿಲ್ಲೆಯಲ್ಲಿ ಬಿಸಿಎಂ ಹಾಸ್ಟೆಲ್‌ಗಳು ಸರಿಯಾಗಿ ಇರುತ್ತವೆ. ಆದರೆ, ಈ ಹಾಸ್ಟೆಲ್ ಅಷ್ಟಾಗಿ ಸರಿಯಾಗಿ ನಿರ್ವಹಣೆಯಾಗಿಲ್ಲ. ಸರಿ ಪಡಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮಕ್ಕಳು ದೂರು ನೀಡಲು ಮುಂದೆ ಬಂದರೆ ನಾನು ಕೂಡಲೇ ಕ್ರಮ ತೆಗೆದುಕೊಳ್ಳುತ್ತೇನೆ. ಯಾವುದಕ್ಕೂ ಹೆದರದೇ ನಿಮ್ಮ ಸಮಸ್ಯೆಗಳನ್ನು ಹೇಳಿ ನಾನು ನಿಮ್ಮೊಂದಿಗೆ ಇದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net