ಮಹಿಳೆಯ ಬ್ಯಾಗ್​ನಲ್ಲಿದ್ದ ಚಿನ್ನಾಭರಣ ಕಳ್ಳತನ

Thief
Published on

ಹಾವೇರಿ: ಬಸ್​ ಇಳಿಯುವಾಗ ನಡೆದ ನೂಕುನುಗ್ಗಲಿನಲ್ಲಿ ಮಹಿಳೆಯ ಬ್ಯಾಗ್​ನಲ್ಲಿದ್ದ ಸುಮಾರು 65 ಗ್ರಾಂ ತೂಕದ ಚಿನ್ನಾಭರಣವನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿರುವ ಘಟನೆ ನಗರದ ಕೇಂದ್ರ ಬಸ್​ ನಿಲ್ದಾಣದಲ್ಲಿ ನಡೆದಿದೆ.

ಹಾನಗಲ್ಲ ತಾಲೂಕು ಹೋತನಹಳ್ಳಿ ಗ್ರಾಮದ ಕುಸುಮಾ ಅರುಣಕುಮಾರ ಮಾಯರ (33) ಎಂಬುವರ ಚಿನ್ನಾಭರಣ ದೋಚಿರುವುದು.

ಮಹಿಳೆ ಶಿಗ್ಗಾಂವಿಯಿಂದ ಬರುವಾಗ ಬ್ಯಾಗ ನೋಡಿಕೊಂಡಿದ್ದು ಬ್ಯಾಗನಲ್ಲಿ ಆಭರಣಗಳು ಇದೆ. ಬಳಿಕ ಹಾನಗಲ್ಲ ಕಡೆಗೆ ಹೋಗುವ ಅಂಕಣದಲ್ಲಿ ಬಸ್​ ಹತ್ತುವಾಗ ನೂಕುನುಗ್ಗಲು ಉಂಟಾಗಿದ್ದರಿಂದ 40 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರ, 20 ಗ್ರಾಂ ತೂಕದ ಎರಡು ಚಿನ್ನದ ಬಳೆ, 5 ಗ್ರಾಂ ತೂಕದ ಕರಿಮಣಿ ತಾಳಿಯಲ್ಲಿರುವ ಎರಡು ಮಾಂಗಲ್ಯ ಹೀಗೆ ಒಟ್ಟು 65 ಗ್ರಾಂ ಇರುವ ಚಿನ್ನಾಭರಣವನ್ನು ಕಳ್ಳರು ದೋಚಿದ್ದಾರೆ ಎನ್ನಲಾಗಿದೆ. ಈ ಕುರಿತು ಶಹರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net