‘ವಿಜಯವಾಣಿ’ಯಿಂದ ಸಮಾಜ ಶುದ್ದೀಕರಣ ಕಾರ್ಯ; ಅಬಕಾರಿ ಇಲಾಖೆ ಡಿಸಿ ಶೈಲಜಾ ಟಿ.ವಿ. ಅನಿಸಿಕೆ; ನಾರಿ ನಿನಗೊಂದು ಸ್ಯಾರಿ ಬಹುಮಾನ ವಿತರಣೆ

25 HVR 1 A
Published on

ಹಾವೇರಿ: ಸಮಾಜವನ್ನು ಶುದ್ಧಗೊಳಿಸುವ ಕಾರ್ಯದಲ್ಲಿ ‘ವಿಜಯವಾಣಿ’ ದಿನಪತ್ರಿಕೆ ಕೆಲಸ ಮಾಡುತ್ತಿದೆ. ವಿವಿಧ ಇಲಾಖೆಗಳಲ್ಲಿನ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ಮೂಲಕ ಸಮಾಜಮುಖಿ ಕೆಲಸಗಳನ್ನು ಪತ್ರಿಕೆ ಮಾಡುತ್ತಿದೆ ಎಂದು ಅಬಕಾರಿ ಇಲಾಖೆ ಉಪ ಆಯುಕ್ತೆ (ಡಿಸಿ) ಶೈಲಜಾ ಟಿ.ವಿ. ಅನಿಸಿಕೆ ವ್ಯಕ್ತಪಡಿಸಿದರು.

ಕನ್ನಡದ ನಂಬರ್ ಒನ್ ದಿನಪತ್ರಿಕೆ ‘ವಿಜಯವಾಣಿ’ ವತಿಯಿಂದ ಇಲ್ಲಿನ ವಿದ್ಯಾನಗರದ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ‘ನಾರಿ ನಿನಗೊಂದು ಸ್ಯಾರಿ’ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಒತ್ತಡದ ಮಧ್ಯೆಯೂ ಮಹಿಳೆಯರು ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸುವ ಕೆಲಸವನ್ನು ವಿಜಯವಾಣಿ ಮಾಡುತ್ತಿದೆ. ಸ್ಪರ್ಧೆಯಲ್ಲಿ ಸಾವಿರಾರು ಮಹಿಳೆಯರು ಭಾಗವಹಿಸಿದ್ದು ಹೆಮ್ಮೆಯ ವಿಷಯ. ವಿಜಯವಾಣಿ ವಿದ್ಯಾರ್ಥಿ ಮಿತ್ರ ಚೆನ್ನಾಗಿ ಮೂಡಿಬರುತ್ತಿದೆ. ವಿದ್ಯಾರ್ಥಿಗಳು ಅದನ್ನು ಓದಿದರೆ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಬಹುದು. ನಾನೂ ಕೂಡ ನಿತ್ಯವೂ ಎರಡೂ ಪತ್ರಿಕೆ ಓದುತ್ತೇನೆ. ಪಾಲಕರು ಮಕ್ಕಳಿಗೆ ಪತ್ರಿಕೆ ಓದುವುದನ್ನು ರೂಢಿಸಿ ಎಂದು ಸಲಹೆ ನೀಡಿದರು.

ವಿಜಯವಾಣಿ ಜಿಲ್ಲಾ ವರದಿಗಾರ ಕೇಶವಮೂರ್ತಿ ವಿ.ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಸರಣ ವಿಭಾಗದ ಜಿಲ್ಲಾ ಪ್ರತಿನಿಧಿ ಕೊಟ್ರೇಶ ಅದವಾನಿಮಠ, ವಾರ್ತಾ ಇಲಾಖೆಯ ದೇವಕಿ ಎಸ್. ಉಂದ್ರಿ, ರಾಘವೇಂದ್ರ ಕುರಣಿ, ಮತ್ತಿತರರು ಪಾಲ್ಗೊಂಡಿದ್ದರು.

ಪತ್ರಿಕೆಗಳ ಘನತೆ ಕಡಿಮೆಯಾಗಿಲ್ಲ

ವಿಜಯವಾಣಿ ನಾರಿ ನಿನಗೊಂದು ಸ್ಯಾರಿ ಸ್ಪರ್ಧೆಯ ಸೀರೆ ವಿಜೇತರಿಗೆ ಅಭಿನಂದನೆಗಳು. ಈ ಸ್ಪರ್ಧೆಯ ಮೂಲಕ ಪತ್ರಿಕೆ ಓದಲು ಓರೆಗೆ ಹಚ್ಚಿರುವ ವಿಜಯವಾಣಿ ತಂಡದ ಕಾರ್ಯ ಅಭಿನಂದನಾರ್ಹವಾದದ್ದು. ಸೀರೆ ಪ್ರಾಚೀನ ಕಾಲದಿಂದಲೇ ತನ್ನ ಮಹತ್ವ ಉಳಿಸಿಕೊಂಡು ಬಂದಿದೆ. ಅದೇರೀತಿ ಪತ್ರಿಕೆಗಳೂ ಅಂದಿನಿಂದ ಇಂದಿನವರೆಗೂ ತನ್ನ ಮಹತ್ವ, ಘನತೆಯನ್ನು ಕಾಪಾಡಿಕೊಂಡು ಬಂದಿವೆ ಎಂದು ವಾರ್ತಾ ಇಲಾಖೆ ಸಹಾಯಕ ನಿರ್ದೇಶಕಿ ಭಾರತಿ ಎಚ್. ಹೇಳಿದರು.

ಕೋಟ್:

ಒಂದು ದಿನ ಪತ್ರಿಕೆ ಓದದಿದ್ದರೆ ಸಮಾಧಾನ ಇರುವುದಿಲ್ಲ. ಒಂದು ದಿನ ವಿಜಯವಾಣಿ ಪತ್ರಿಕೆ ಮಳೆಗೆ ಒದ್ದೆಯಾಗಿತ್ತು. ಆದರೂ ಪಕ್ಕದ ಮನೆಯಿಂದ ಪತ್ರಿಕೆ ತರಿಸಿ ಪ್ರಶ್ನೆಗೆ ಉತ್ತರ ಬರೆದು ಕಚೇರಿಗೆ ಕಳುಹಿಸಿದ್ದೆ. ಬಹುಮಾನಕ್ಕೆ ಆಯ್ಕೆಯಾಗಿದೆ ಎಂದು ಕರೆ ಬಂದಾಗ ಸಂಭ್ರಮ ಪಟ್ಟಿದ್ದೇನೆ. ಅವಕಾಶಕ್ಕಾಗಿ ಪತ್ರಿಕಾ ಬಳಗಕ್ಕೆ ಧನ್ಯವಾದಗಳು.

- ಹೇಮಾ ಆರಾಧ್ಯಮಠ, ಸೀರೆ ವಿಜೇತರು, ಹಾವೇರಿ

ವಿಜೇತರ ಪಟ್ಟಿ

ಹಾವೇರಿ ಜಯದೇವ ನಗರದ ಡಾ.ದೀಪಾ ಪುರಾಣಿಕಮಠ, ಇಜಾರಿ ಲಕಮಾಪುರದ ಮಾಲತಿ ಕುಂಕೂರ, ದಾನೇಶ್ವರಿ ನಗರದ ಸುನಂದಾ ಎಂ.ಎಂ., ಕಲ್ಲುಮಂಟಪ ರಸ್ತೆಯ ಹೇಮಾ ಜಿ. ಆರಾಧ್ಯಮಠ ಹಾಗೂ ಹಾವೇರಿ ತಾಲೂಕು ಕರ್ಜಗಿಯ ವನಿತಾ ಮಾ. ಕೆಂಗೊಂಡ ಸೀರೆ ವಿಜೇತರಾದ ಅದೃಷ್ಟಶಾಲಿಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net