

ಹಾವೇರಿ: ನಾರಿ ನಿನಗೊಂದು ಸ್ಯಾರಿ ಸ್ಪರ್ಧೆಯ ಮೂಲಕ ‘ವಿಜಯವಾಣಿ’ ಪತ್ರಿಕೆ ಮಹಿಳೆಯರಲ್ಲಿ ಜ್ಞಾನ ಹೆಚ್ಚಿಸುವ ಜತೆಗೆ ಅವರನ್ನು ಮುಖ್ಯ ಭೂಮಿಕೆಗೆ ಕರೆತರುವ ಮಹತ್ವದ ಕೆಲಸವನ್ನೂ ಮಾಡಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಸರಿತಾ ಶ್ಲಾಘನೆ ವ್ಯಕ್ತಪಡಿಸಿದರು.
ಕನ್ನಡದ ನಂಬರ್ ಒನ್ ದಿನಪತ್ರಿಕೆ ‘ವಿಜಯವಾಣಿ’ ವತಿಯಿಂದ ಇಲ್ಲಿನ ಅಶ್ವಿನಿ ನಗರದ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಅವರು ‘ನಾರಿ ನಿನಗೊಂದು ಸ್ಯಾರಿ’ ಸ್ಪರ್ಧೆಯ ಹಾವೇರಿ ವಿಧಾನಸಭಾ ಕ್ಷೇತ್ರದ ವಿಜೇತರಿಗೆ ಸೀರೆ ವಿತರಿಸಿ ಅವರು ಮಾತನಾಡಿದರು.
ಮಹಿಳೆಯರು ಶಿಕ್ಷಣ, ಸಂಸ್ಕೃತಿ, ಸಾಂಸ್ಕೃತಿಕ, ವಿಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಮೂಲಕ ನಾರಿ ಶಕ್ತಿಯನ್ನು ಜಗತ್ತಿಗೆ ತೋರಿದ್ದಾರೆ. ಆಧುನಿಕತೆಯ ಭರಾಟೆಯಲ್ಲಿ ನಮ್ಮ ಸಂಸ್ಕೃತಿಯನ್ನು ಎಂದಿಗೂ ಮರೆಯಬಾರದು.ನಮ್ಮ ಮಕ್ಕಳಿಗೆ ಸೀರೆಯ ಮಹತ್ವ ತಿಳಿಸಬೇಕು ಎಂದು ಕರೆ ನೀಡಿದರು.
ಶ್ರೀ ಸಾಯಿ ಭಜನಾ ಮಂಡಳಿಯ ಪದಾಧಿಕಾರಿಗಳಾದ ಪುಷ್ಪಾ ಎಸ್. ಕುಂಬಾರ, ರೇಖಾ ಬಳಿಗಾರ, ಪ್ರೇಮಾ ಗೊಡಚಿ, ಉಮಾ ಚೌಕಿಮಠ, ರಶ್ಮಿ ಹಲಸಗಿ, ಉಮಾ ದಿವೇಕರ, ಸುಶೀಲಾ ಚಕ್ರಸಾಲಿ, ಜಯಮ್ಮ ಕನವಳ್ಳಿ, ನಂದಿನಿ ಕನವಳ್ಳಿ, ಮತ್ತಿತರರು ಉಪಸ್ಥಿತರಿದ್ದರು.
ಬಹುಮಾನ ವಿಜೇತರಿವರು
ಹಾವೇರಿ ವಿದ್ಯಾನಗರದ ಕವಿತಾ ಕಳ್ಳಿಮನಿ, ಬಸವೇಶ್ವರ ನಗರದ ನಿರ್ಮಲಾ ಚಿಕ್ಕಮಠ, ಹಂದಿಗನೂರ ಗ್ರಾಮದ ವಿದ್ಯಾವತಿ ಮಾಮ್ಲೆದೇಸಾಯಿ, ದಿಡಗೂರಿನ ಡಾ.ವೀಣಾ ಕಳ್ಳೇರ, ಕುರುಬಗೊಂಡದ ಜಯಶೀಲಾ ತಿಮ್ಮಾಪುರ ಸೀರೆಯನ್ನು ಬಹುಮಾನವಾಗಿ ಪಡೆದು ಸಂಭ್ರಮ ವ್ಯಕ್ತಪಡಿಸಿದರು.