

ಹಾವೇರಿ: ಕನ್ನಡದ ನಂಬರ್ ಒನ್ ದಿನಪತ್ರಿಕೆ ‘ವಿಜಯವಾಣಿ’ ವತಿಯಿಂದ ಇಲ್ಲಿನ ಅಕ್ಕನ ಬಳಗದ ಅಕ್ಕಮಹಾದೇವಿ ಹಾಗೂ ಕೋಟೆ ಆಂಜನೇಯ ದೇವಸ್ಥಾನದಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ‘ನಾರಿ ನಿನಗೊಂದು ಸ್ಯಾರಿ’ ಸ್ಪರ್ಧೆಯ ಹಾವೇರಿ ವಿಧಾನಸಭೆ ಕ್ಷೇತ್ರದ ಐವರು ವಿಜೇತರನ್ನು ಶ್ರೀ ಹುಕ್ಕೇರಿ ಮಠದ ಅಕ್ಕನ ಬಳಗದ ಪದಾಧಿಕಾರಿಗಳು ಆಯ್ಕೆ ಮಾಡಿದರು.
ಸ್ಪರ್ಧೆಯಲ್ಲಿ ಹಾವೇರಿ ವಿಧಾನಸಭಾ ಕ್ಷೇತ್ರದ ಸಾವಿರಾರು ಮಹಿಳಾ ಓದುಗರು ಭಾಗವಹಿಸಿದ್ದರು. ಆಗಸ್ಟ್ 1ರಿಂದ ಸೆಪ್ಟೆಂಬರ್ 15ರವರೆಗೆ ಜರುಗಿದ ಸ್ಪರ್ಧೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಸರಿ ಉತ್ತರ ಬರೆದು ಕಳುಹಿಸಿದ ಕೂಪನ್‌ಗಳನ್ನು ಕಾರ್ಯಕ್ರಮದಲ್ಲಿ ರಾಶಿ ಹಾಕಲಾಗಿತ್ತು. ಅಕ್ಕನ ಬಳಗದ ಪದಾಧಿಕಾರಿಗಳ ಸಮ್ಮುಖದಲ್ಲಿ ವಿಡಿಯೋ ಚಿತ್ರೀಕರಣ ಸಮೇತ ಐವರು ವಿಜೇತರನ್ನು ಆಯ್ಕೆ ಮಾಡಲಾಯಿತು.
ಸಮಾರಂಭದಲ್ಲಿ ಶ್ರೀ ಹುಕ್ಕೇರಿ ಮಠದ ಅಕ್ಕನ ಬಳಗದ ಅಧ್ಯಕ್ಷೆ ಚಂಪಾ ಎಂ. ಹುಣಸಿಕಟ್ಟಿ, ಉಪಾಧ್ಯಕ್ಷೆ ಸ್ಮಿತಾ ಕುರುಬಗೊಂಡಶೆಟ್ಟರ್, ಖಜಾಂಚಿ ಗಿರಿಜಾ ಮುಷ್ಟಿ, ಕಾರ್ಯದರ್ಶಿ ವನಿತಾ ಮಾಗನೂರ, ಸದಸ್ಯರಾದ ಕಮಲಾ ಬುಕ್ಕಶೆಟ್ಟಿ, ಲಲಿತಮ್ಮ ಅಂಕಲಕೋಟಿ, ರೇಖಾ ಮಾಗನೂರ, ಮತ್ತಿತರರು ಉಪಸ್ಥಿತರಿದ್ದರು.
ಅಭೂತಪೂರ್ವ ಬೆಂಬಲ
ಜಿಲ್ಲೆಯಾದ್ಯಂತ ಹಮ್ಮಿಕೊಂಡಿದ್ದ ‘ನಾರಿ ನಿನಗೊಂದು ಸ್ಯಾರಿ’ ಸ್ಪರ್ಧೆಗೆ ಓದುಗರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಸಹಸ್ರಾರು ಮಹಿಳೆಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಜಿಲ್ಲೆಯ 6 ವಿಧಾನಸಭಾವಾರು ಪ್ರತ್ಯೇಕ ಬಾಕ್ಸ್‌ಗಳಲ್ಲಿ ಕೂಪನ್‌ಗಳನ್ನು ಪ್ರತ್ಯೇಕಿಸಲಾಗಿದೆ. ಶೀಘ್ರದಲ್ಲೇ ಆಯಾ ವಿಧಾನಸಭಾವಾರು ಆಯ್ಕೆ ಪ್ರಕ್ರಿಯೆ ಹಾಗೂ ಬಹುಮಾನ ವಿತರಣೆ ಸಮಾರಂಭ ಜರುಗಲಿದೆ.
ಹಾವೇರಿ ವಿಧಾನಸಭಾ ಕ್ಷೇತ್ರದ ವಿನ್ನರ್ ಯಾರು ?
1) ಕವಿತಾ ಕಳ್ಳಿಮನಿ, ವಿದ್ಯಾನಗರ, ಹಾವೇರಿ
2) ನಿರ್ಮಲಾ ಚಿಕ್ಕಮಠ, ಬಸವೇಶ್ವರ ನಗರ, ಹಾವೇರಿ
3) ಡಾ.ವೀಣಾ ಕಳ್ಳೇರ, ದಿಡಗೂರ
4) ವಿದ್ಯಾವತಿ ಯು.ಎಂ., ಹಂದಿಗನೂರ
5) ಜಯಶೀಲಾ ತಿಮ್ಮಾಪುರ, ಕುರುಬಗೊಂಡ