ಸ್ವಾತಂತ್ರೃ ವೀರರ ಗುಣಗಳನ್ನು ಅಳವಡಿಸಿಕೊಳ್ಳಿ; ವಿದ್ಯಾಶಿಲ್ಪ ಶಾಲೆಯ ಅಧ್ಯಕ್ಷ ನಾಗೇಂದ್ರ ಮಾಳಿ ಕಿವಿಮಾತು

18 HVR 9
Published on

ಹಾವೇರಿ: ಸ್ವಾತಂತ್ರ್ಯ ದಿನದಂದು ಒಂದು ದಿನ ಸ್ವಾತಂತ್ರೃಕ್ಕಾಗಿ ಮಡಿದ ಹುತಾತ್ಮರನ್ನು ನೆನೆದು ಕೈ ಬಿಡಬಾರದು. ಅವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ವಿದ್ಯಾಶಿಲ್ಪ ಇಂಟರನ್ಯಾಷನಲ್ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ನಾಗೇಂದ್ರ ಮಾಳಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರದ ಹಾನಗಲ್ಲ ರಸ್ತೆಯ ವಿದ್ಯಾಶಿಲ್ಪ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸ್ವಾತಂತ್ರೊೃೀತ್ಸವ ಹಾಗೂ ಶಾಲಾ ಸಂಸತ್ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಳೆಯ ನಡುವೆಯೂ ಶಾಲಾ ಮಕ್ಕಳು ಶಿಸ್ತುಬದ್ಧವಾಗಿ ಪಥಸಂಚನ ನಡೆಸಿದರು. ಬಳಿಕ ಮಕ್ಕಳ ಸಾಂಸ್ಕೃತಿಕ ನೃತ್ಯಗಳು ನೋಡುಗರ ಮನ ಸೆಳೆದವು.

ಸಮಾರಂಭದಲ್ಲಿ ನಿವೃತ್ತ ಸೈನಿಕ ಶಿವಬಸಪ್ಪ ಕುಂಬಾರ, ಶಾಲೆಯ ನಿರ್ದೇಶಕಿ ಚಂದ್ರಕಲಾ ಮಾಳಿ, ಆಡಳಿತಾಧಿಕಾರಿ ಸೌಮ್ಯ ಮಾಳಿ, ಪ್ರಾಚಾರ್ಯ ಕ್ಸೇವಿಯರ್ ಆಂಥೋನಿ, ಅಫ್ರೋಜ್, ಬೋಧಕ, ಬೋಧಕೇತರ ಸಿಬ್ಬಂದಿ, ಉಪಸ್ಥಿತರಿದ್ದರು. ಹೆಲನ್ ಮಾರ್ಗರೇಟ್‌ರಾಣಿ ಸ್ವಾಗತಿಸಿದರು. ಯಶಸ್ವಿನಿ ಹಾಗೂ ಭೂಮಿಕಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net