

ಹಾವೇರಿ: ನಗರದ ಪಿ.ಬಿ.ರಸ್ತೆಯ ವಿದ್ಯಾನಗರ ಪಶ್ಚಿಮ ಬಡಾವಣೆಯ 3ನೇ ಕ್ರಾಸ್‌ನ ವೃತ್ತಕ್ಕೆ ನಿಜಶರಣ ಅಂಬಿಗರ ಚೌಡಯ್ಯನವರ ವೃತ್ತ ಎಂದು ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ ಸೋಮವಾರ ನಾಮಕರಣ ಮಾಡಿದರು. ಅಂಬಿಗರ ಚೌಡಯ್ಯ ಗುರುಪೀಠದ ಶ್ರೀ ಶಾಂತಭೀಷ್ಮ ಸ್ವಾಮೀಜಿ, ಶಾಸಕ ರುದ್ರಪ್ಪ ಲಮಾಣಿ, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಸಮಾಜದ ಜಿಲ್ಲಾಧ್ಯಕ್ಷ ಮಂಜುನಾಥ ಭೋವಿ, ಬಸವರಾಜ ಕಳಸೂರ, ರೇಣುಕಾ ಪುತ್ರನ್, ನಾಗರಾಜ ಬಿಷ್ಟಣ್ಣವರ, ಶಂಕ್ರಣ್ಣ ಅಂಬಿಗೇರ, ಹೊನ್ನಪ್ಪ ದಂಡಿನ, ಶಂಕರ ಸುತಾರ, ಮಂಜುನಾಥ ಪುಡಗನಾಳ, ಎಚ್.ಕೆ.ಯೋಗರಾಜ, ಪ್ರವೀಣ ವಡ್ನಿಕೊಪ್ಪ, ಪ್ರಕಾಶ ಅಂಬಿಗೇರ, ಶಂಭು ಸಕ್ರೆಣ್ಣವರ, ಮುತ್ತಣ್ಣ ಅಂಬಿಗೇರ, ಚಿನ್ನಪ್ಪ ಜಾಡರ, ಇತರರಿದ್ದರು.