

ಹಾವೇರಿ: ವಿಶ್ವ ಹಿಂದು ಪರಿಷತ್ ಬಜರಂಗದಳ ವತಿಯಿಂದ ನಗರದಲ್ಲಿ ಜ.4ರಂದು ಸಂಜೆ 4 ಗಂಟೆಗೆ ಶೌರ್ಯ ಸಂಚಲನ ಯಾತ್ರೆ ಹಮ್ಮಿಕೊಳ್ಳಲಾಗಿದೆ.
ಸಂಜೆ 4 ಗಂಟೆಗೆ ಹುಕ್ಕೇರಿ ಮಠದಿಂದ ಯಾತ್ರೆ ಆರಂಭವಾಗಲಿದ್ದು, ಎಂಜಿ ರಸ್ತೆ, ಜೆಪಿ ವೃತ್ತದ ಮೂಲಕ ಮುನ್ಸಿಪಲ್ ಮೈದಾನ ತಲುಪಲಿದೆ. ಸಂಜೆ 5.30ಕ್ಕೆ ಮುನ್ಸಿಪಲ್ ಕ್ರೀಡಾಂಗಣದ ವೇದಿಕೆ ಕಾರ್ಯಕ್ರಮ ಆರಂಭವಾಗಲಿದೆ.
ಬಣ್ಣದ ಮಠದ ಶ್ರೀ ಅಭಿನವ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ನಿವೃತ್ತ ಡಿಡಿಪಿಯು ಎಂ.ಆಂಜನೇಯ ಅಧ್ಯಕ್ಷತೆ ವಹಿಸುವರು. ಬಜರಂಗದಳ ಉತ್ತರ ಪ್ರಾಂತ ಸಂಯೋಜಕ ಪುಂಡಲೀಕ ದಳವಾಯಿ ಮುಖ್ಯವಕ್ತಾರರಾಗಿ ಭಾಗವಹಿಸುವರು. ವಿಎಚ್‌ಪಿ ಪ್ರಾಂತ ಸಹ ಕಾರ್ಯದರ್ಶಿ ವಿನಾಯಕ ತಲಗೇರಿ, ಧಾರವಾಡ ವಿಭಾಗ ಕಾರ್ಯದರ್ಶಿ ರಮೇಶ ಕದಂ, ಬಜರಂಗದಳ ವಿಭಾಗ ಸಂಯೋಜಕ ಶಿವಾನಂದ ಸತ್ತಿಗೇರಿ, ವಿಎಚ್‌ಪಿ ಜಿಲ್ಲಾಧ್ಯಕ್ಷ ಜಗದೀಶ ಶಿಂಧೆ, ಇತರರು ಭಾಗವಹಿಸಲಿದ್ದಾರೆ ಎಂದು ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ಅನೀಲ ಹಲವಾಗಿಲ ತಿಳಿಸಿದ್ದಾರೆ.