ವೀರಶೈವ ಮಹಾಸಭಾದಿಂದ ವಿವಿಧ ಸ್ಪರ್ಧೆ ಏ.19ರಂದು

Published on

ಹಾವೇರಿ: ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ, ತಾಲೂಕು ಘಟಕಗಳ ಸಹಯೋಗದಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿ ಹಾಗೂ ಇತರ ದಾರ್ಶನಿಕರ ಜಯಂತಿ ಅಂಗವಾಗಿ ಏ.19ರಂದು ಬೆಳಗ್ಗೆ 9.30ಕ್ಕೆ ಇಲ್ಲಿನ ದಾನೇಶ್ವರಿ ನಗರದ ಮಹಾಸಭಾದ ಕಚೇರಿಯಲ್ಲಿ ರಂಗೋಲಿ, ವಚನ, ಕವನ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

25 ವರ್ಷ ಮೇಲ್ಪಟ್ಟವರು ನೇರವಾಗಿ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಪ್ರತಿ ಸ್ಪರ್ಧೆಗೆ ಐದು ನಿಮಿಷ ನಿಗದಿ ಮಾಡಲಾಗಿದೆ. ಪ್ರಕೃತಿ, ಸಾಹಿತ್ಯ, ಮಹಿಳಾ ಸಬಲೀಕರಣದ ಬಗ್ಗೆ ಸ್ವರಚಿತ ಕವನ ವಾಚನ ಮಾಡಬೇಕು. ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸುವರು ರಂಗೋಲಿ ಹಿಟ್ಟು, ಅದಕ್ಕೆ ಬೇಕಾಗುವ ಬಣ್ಣಗಳನ್ನು ತರಬೇಕು. ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು ಎಂದು ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಎಸ್ ಕೋರಿಶೆಟ್ಟರ ಹಾಗೂ ತಾಲೂಕು ಘಟಕದ ಅಧ್ಯಕ್ಷ ಮೃತುಂಜ್ಯಯ ಬುಕ್ಕಶೆಟ್ಟಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net