

ಹಾವೇರಿ: ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಎಂ.ಎಸ್.ಕೋರಿಶೆಟ್ಟರ್ ಮತ್ತೊಮ್ಮೆ ಅವಿರೋಧ ಆಯ್ಕೆಯಾಗಿದ್ದಾರೆ.
ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಲಿಂಗರಾಜ ಚಪ್ಪರದಹಳ್ಳಿ ಸೋಮವಾರ ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ಕೋರಿಶೆಟ್ಟರ್ ಅವಿರೋಧವಾಗಿ ಆಯ್ಕೆಯಾದರು. ಜಿಲ್ಲಾ ಕಾರ್ಯನಿರ್ವಾಹಕ ಸಮಿತಿ ಸದಸ್ಯರ ಸ್ಥಾನಕ್ಕೆ 28 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಉಪಚುನಾವಣಾ ಅಧಿಕಾರಿ ಪ್ರವೀಣ ಎಂ. ತುಪ್ಪದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯನಿರ್ವಾಹಕ ಸಮಿತಿ ಸದಸ್ಯರು
ಮಲ್ಲಿಕಾರ್ಜುನ ಸಿ. ಹಾವೇರಿ, ಸಂತೀಶ ಸಂದಿಮನಿ, ಶಿವಶಂಕರಸ್ವಾಮಿ ಕುರುಬೆಟ್ಟ ಹಿರೇಮಠ, ಚನ್ನಬಸಯ್ಯ ಲಕ್ಷ್ಮೇಶ್ವರಮಠ, ಶಂಕರ ಬಿಸರಳ್ಳಿ, ಚಂದ್ರಶೇಖರ ಪಟ್ಟಣಶೆಟ್ಟಿ, ಈರಣ್ಣ ಕೆಂಚಮಲ್ಲ, ಮಾಲತೇಶ ವೀರಾಪುರ, ಅಜ್ಜನಗೌಡ ಗೌಡಪ್ಪಗೌಡ್ರ, ವಿರುಪಾಕ್ಷಪ್ಪ ಕಡ್ಲಿ, ರಾಘವೇಂದ್ರ ಕುಡುವಕ್ಕಲಿಗರ, ರಾಜಕುಮಾರ ಮೆಣಸಿನಕಾಯಿ, ರಾಜೇಶ ಗುಡಿ, ಬಸವರಾಜ ಹಾದಿಮನಿ, ಶಂಕರಗೌಡ ಪಾಟೀಲ, ಸಿದ್ದಪ್ಪ ಬಂಕಾಪುರ, ಗುರುಶಾಂತಪ್ಪ ಯತ್ತಿನಹಳ್ಳಿ, ಪ್ರಕಾಶ ಬನ್ನಿಹಟ್ಟಿ, ಸಿದ್ದಾರ್ಥ ಪಾಟೀಲ, ಸಂದೀಪ ಚಿನ್ನಿಕಟ್ಟಿ, ಮಹಿಳಾ ಮೀಸಲಾತಿ ಕೋಟಾದಡಿ ದ್ರಾಕ್ಷಾಯಿಣಿ ಗಾಣಗೇರ, ಅಮೃತಮ್ಮ ಶೀಲವಂತರ, ಅನಸೂಯ ಯರವಿನತಲಿ, ಲಲಿತಾ ಹಿರೇಮಠ, ಅನುಷಾ ಚಕ್ಕಡಿ, ಶೋಭಾ ಮಹಾರಾಜಪೇಟ, ಜ್ಯೋತಿ ಬಶೆಟ್ಟಿಯವರ, ಎಸ್.ಎಂ.ಬಳಿಗಾರ ಕಾರ್ಯನಿರ್ವಾಹಕ ಸಮಿತಿ ಸದಸ್ಯ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.