ಬಸವಣ್ಣನವರ ವಚನ ಮೈಗೂಡಿಸಿಕೊಂಡರೆ ದೇಶ ಸುಭದ್ರ; ಅಖಿಲ ಭಾರತ ವೀರಶೈವ ಮಹಾಸಭಾ ವಚನ ಸ್ಪರ್ಧೆಯಲ್ಲಿ ಎಂ.ಎಸ್.ಕೋರಿಶೆಟ್ಟ್ಟರ ಹೇಳಿಕೆ

10 HVR 6
Published on

ಹಾವೇರಿ: ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ರಂಗದಲ್ಲಿರುವವರು ಬಸವಣ್ಣನವರ ವಚನಗಳನ್ನು ಅಧ್ಯಯನ ನಡೆಸಿ ಅದರಂತೆ ನಡೆದುಕೊಂಡರೆ ದೇಶದ ಭವಿಷ್ಯ ಸುಭದ್ರವಾಗಿರುತ್ತದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಎಸ್.ಕೋರಿಶೆಟ್ಟರ ಹೇಳಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಹಾಗೂ ತಾಲೂಕು ಘಟಕಗಳ ವತಿಯಿಂದ ನಗರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಚನ ಸ್ಪರ್ಧೆ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿದ್ದ ಎಲ್ಲ ಶರಣ ಶರಣೆಯರು ವಚನಗಳನ್ನು ರಚಿಸಿ ಅದರ ಮೂಲಕ ಸಮಾಜಕ್ಕೆ ತಿಳುವಳಿಕೆ ಹೇಳಿದರು. ಅಂದು ರಚಿಸಿದ ವಚನಗಳು ಇಂದಿನ ಯುವಕ- ಯುವತಿಯರಿಗೆ ಅತ್ಯುಪಯುಕ್ತವಾಗಿವೆ. ಇಂದಿನ ಪೀಳಿಗೆ ಬಹುಮುಖ್ಯವಾಗಿ ವಚನಗಳನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಇದರಿಂದ ಸಮೃದ್ಧವಾದ ದೇಶ ಕಟ್ಟಬಹುದು ಎಂದರು
ಸ್ಪರ್ಧೆಯಲ್ಲಿ 50ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಅಮೃತಮ್ಮ ಶಿಲವಂತರ, ಶಿವಬಸಮ್ಮ ಲಕ್ಕಣ್ಣವರ, ಸಿ.ಎಸ್.ಮರಳಿಹಳ್ಳಿ, ಶಿವಬಸಪ್ಪ ಮುದ್ದಿ, ಮಲ್ಲಿಕಾರ್ಜುನ ಹಿಂಚಿಗೇರಿ ನಿರ್ಣಾಯಕರಾಗಿ ಭಾಗವಹಿಸಿದ್ದರು.
ಹಾವೇರಿ ತಾಲೂಕು ಘಟಕದ ಅಧ್ಯಕ್ಷ ಮೃತ್ಯುಂಜಯ ಬುಕ್ಕಶೆಟ್ಟಿ, ಉಪಾಧ್ಯಕ್ಷ ಅಜ್ಜನಗೌಡ ಗೌಡಪ್ಪನವರ, ದಾಕ್ಷಾಯಿಣಿ ಗಾಣಿಗೇರ, ಅಶ್ವಿನಿ ಟೊಂಕದ, ಲತಾ ಭರತನೂರಮಠ, ಶ್ವೇತಾ ತುಪ್ಪದ, ಶೈಲಜಾ ಕೋರಿಶೆಟ್ಟರ್, ಶಾಂತಮ್ಮ ದೊಡ್ಮನಿ, ಅನ್ನಪೂರ್ಣಮ್ಮ ಅಂಕಲ ಕೋಟಿ, ಈರಣ್ಣ ಹರನಗೇರಿ, ಇತರರು ಪಾಲ್ಗೊಂಡಿದ್ದರು. ಅನುಸೂಯ ಎರವಿನತಲಿ ಸ್ವಾಗತಿಸಿದರು. ಲತಾ ಭರತನೂರಮಠ ನಿರೂಪಿಸಿದರು. ನೀಲಮ್ಮ ಲಿಂಬರಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net