

ಹಾವೇರಿ: ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ರಾಜೇಂದ್ರ ನಗರದ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮಹಾಸಭಾದ ಚುನಾವಣೆಯಲ್ಲಿ ಆಯ್ಕೆಯಾದ ಜಿಲ್ಲಾ, ತಾಲೂಕು ಘಟಕಗಳ ಅಧ್ಯಕ್ಷರು, ಕಾರ್ಯನಿರ್ವಾಹಕ ಸಮಿತಿ ಸದಸ್ಯರಿಗೆ ದೃಢೀಕರಣ ಪತ್ರ ವಿತರಿಸಲಾಯಿತು.
ಜಿಲ್ಲಾ ಉಪ ಚುನಾವಣಾ ಅಧಿಕಾರಿ ಪ್ರವೀಣ ತುಪ್ಪದ, ತಾಲೂಕು ಘಟಕಗಳ ಸಹಾಯಕ ಚುನಾವಣಾ ಅಧಿಕಾರಿಗಳಾದ ರುದ್ರಪ್ಪ ಬಶೆಟ್ಟಿಯವರ ಮತ್ತು ಅಶೋಕ ಯತ್ನಳ್ಳಿ ದೃಢೀಕರಣ ಪತ್ರ ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಎಸ್.ಕೋರಿಶೆಟ್ಟರ ಮಾತನಾಡಿ, ಎಲ್ಲ ಸಮಾಜ ಬಾಂಧವರನ್ನು ಭೇದ ಭಾವ ಮಾಡದೇ ಸಮಾನವಾಗಿ ಕರೆದುಕೊಂಡು ಹೋಗುವ ಮನೋಭಾವ ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.
ಕಾರ್ಯನಿರ್ವಾಹಕ ಸಮಿತಿ ಸದಸ್ಯ ಮಲ್ಲಿಕಾರ್ಜುನ ಹಾವೇರಿ, ತಾಲೂಕ ಘಟಕದ ಅಧ್ಯಕ್ಷ ಮೃತುಂಜ್ಯಯ ಬುಕ್ಕಶೆಟ್ಟಿ ಮಾತನಾಡಿದರು. ಮಹಾಸಭಾ ರಾಜ್ಯ ಘಟಕದ ಕಾರ್ಯನಿರ್ವಾಹಕ ಸಮಿತಿ ಸದಸ್ಯ ಶಂಭು ಚಕ್ಕಡಿ ಮತ್ತು ಜಿಲ್ಲಾಧ್ಯಕ್ಷ ಎಂ.ಎಸ್.ಕೋರಿಶೆಟ್ಟರ ಅವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಕಾರ್ಯನಿರ್ವಾಹಕ ಸಮಿತಿ ಸದಸ್ಯರಾದ ಅಜ್ಜನಗೌಡ ಗೌಡಪ್ಪನವರ, ಶಂಕರ ಬಿಸಲಳ್ಳಿ, ಶಂಕರೇಗೌಡ ಪಾಟೀಲ,ಪ್ರಕಾಶ ಬನ್ನಿಹಟ್ಟಿ, ಸಂದೀಪ ಚಿನ್ನಿಕಟ್ಟಿ, ದ್ರಾಕ್ಷಾಯಿಣಿ ಗಾಣಿಗೇರ, ಅಮೃತಮ್ಮ ಶೀಲವಂತರ, ಅನಸೂಯಾ ಯರವಿನತಲಿ, ಶೋಭಾ ಮಹರಾಜಪೇಟ, ಜ್ಯೋತಿ ಬಶೆಟ್ಟಿಯವರ, ರುದ್ರಗೌಡ ಮಲ್ಲನಗೌಡ, ವೀರಣ್ಣ ಹರನಗೇರಿ, ಶಶಿಧರ ಬಶೆಟ್ಟಿಯವರ, ಕಲವೀರಪ್ಪ ಬೆಟಗೇರಿ, ಶಾಂತಪ್ಪ ಆನಿಶೆಟ್ಟರ, ಶರಣಪ್ಪ ವಿಭೂತಿ, ಪಂಚಾಕ್ಷರಯ್ಯ ಮಳಿಮಠ, ಕರಬಸಪ್ಪ ಪಾಟೀಲ, ಕುಮಾರಸ್ವಾಮಿ ಹಿರೇಮಠ, ಶಂಭು ನಿಂಗನಗೌಡ, ಶ್ವೇತಾ ತುಪ್ಪದ, ಅಶ್ವಿನಿ ಟೊಂಕದ, ದೀಪಾ ಹಲಗಣ್ಣನವರ, ಇತರರಿದ್ದರು.
ಪ್ರಭಪ್ಪ ಮರಗೂರ ಸ್ವಾಗತಿಸಿದರು, ಲತಾ ಬರತನೂರಮಠ ಮತ್ತು ನೀಲಮ್ಮ ನಿಂಬರಗಿ ಪ್ರಾರ್ಥಿಸಿದರು. ವಿ.ಎಂ.ಗೌಡರ ನಿರೂಪಿಸಿದರು.