

ಹಾವೇರಿ: ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ, ತಾಲೂಕು ಘಟಕದಿಂದ ಬುಧವಾರ ಇಲ್ಲಿನ ದಾನೇಶ್ವರಿ ನಗರದ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ಮಹಾತ್ಮ ಗಾಂಧೀಜಿಯವರ 155ನೇ ಜನ್ಮ ದಿನ ಆಚರಿಸಲಾಯಿತು.
ಜಿಲ್ಲಾಧ್ಯಕ್ಷ ಎಂ.ಎಸ್.ಕೋರಿಶೆಟ್ಟರ ಮಾತನಾಡಿ, ಮಹಾತ್ಮ ಗಾಂಧೀಜಿಯವರ ಮುಂದಾಳತ್ವದಲ್ಲಿ ಅಹಿಂಸಾ ಮಂತ್ರದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾ ನಾಯಕರು. ಅವರ ಸ್ಮರಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಅವರ ಕನಸನಂತೆ ದೇಶದಲ್ಲಿ ಸ್ವಚ್ಛತೆ ಇರಬೇಕಾದರೆ ಕೇಂದ್ರ ಸರ್ಕಾರ ಪ್ಲಾಸ್ಟಿಕ್ ಮತ್ತು ಗುಟಕಾವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದರು. ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ 120ನೇ ಜಯಂತಿಯ ಶುಭ ಕೋರಿದರು.
ಷಣ್ಮುಖಪ್ಪ ಉಳ್ಳಾಗಡ್ಡಿ, ವಿ.ಎ.ಗೌಡರ, ಮಹಾಸಭಾ ರಾಜ್ಯ ಘಟಕದ ಕಾರ್ಯನಿರ್ವಾಹಕ ಸಮಿತಿ ಸದಸ್ಯ ಶಂಬಣ್ಣ ಚಕ್ಕಡಿ, ತಾಲೂಕ ಘಟಕದ ಅಧ್ಯಕ್ಷ ಮೃತ್ಯುಂಜಯ ಬುಕ್ಕ ಶೆಟ್ಟಿ, ಅಜ್ಜನಗೌಡ ಗೌಡಪ್ಪನವರ, ಚಂದ್ರಶೇಖರ ಪಟ್ಟಣಶೆಟ್ಟಿ, ಸಿದ್ದಣ್ಣ ಬಂಕಾಪುರ, ಅನುಸೂಯ ಯರವಿನತಲಿ, ಶ್ವೇತಾ ತುಪ್ಪದ, ಅಶ್ವಿನಿ ಟೊಂಕದ, ಜ್ಯೋತಿ ಬಸಟ್ಟಿಯವರ, ದೀಪಾ ಹಲಗನ್ನವರ, ನೀಲಮ್ಮ ಗೌಡಪ್ಪನವರ, ಶೈಲಜಾ ಕೋರಿಶೆಟ್ಟರ, ಪ್ರಭಪ್ಪ ಮರಗೂರ, ಜಯಣ್ಣ ಚೌಡಿಮಠ, ಇತರರಿದ್ದರು.