

ಹಾವೇರಿ: ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಘಟಕದ ಕಾರ್ಯನಿರ್ವಾಹಕ ಸಮಿತಿಯ ಸಾಮಾನ್ಯ ಸದಸ್ಯರ ಚುನಾವಣೆ ರಾಜೇಂದ್ರ ನಗರದ ಮಹಾಸಭಾ ಕಾರ್ಯಾಲಯದಲ್ಲಿ ಆ.25ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 5ರವರೆಗೆ ನಡೆಯಲಿದೆ. ಕಾರ್ಯನಿರ್ವಾಹಕ ಸಮಿತಿಯ 27 ಸ್ಥಾನಗಳಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 57 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಮಹಾಸಭೆಯ ಉಪಪೋಷಕರು ಹಾಗೂ ಅದಕ್ಕಿಂತ ಮೇಲಿನ ಹಂತದ ಸದಸ್ಯರುಗಳು ಈ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿರುತ್ತಾರೆ. ಒಬ್ಬರು 27 ಜನರಿಗೆ ಗರಿಷ್ಠ ಮತ ಚಲಾಯಿಸಬಹುದು. ಜಿಲ್ಲೆಯಲ್ಲಿ 290 ಸದಸ್ಯರಿದ್ದಾರೆ. ಎಲ್ಲರೂ ಮತ ಚಲಾಯಿಸಬೇಕು ಎಂದು ಮಹಾಸಭಾ ಜಿಲ್ಲಾ ಅಧ್ಯಕ್ಷ ಎಂ.ಎಸ್.್ಕೋರಿಶೆಟ್ಟರ ಪ್ರಕಟಣೆ ಮೂಲಕ ಕೋರಿಕೊಂಡಿದ್ದಾರೆ.