

ಹಾವೇರಿ: ರಾಜೇಂದ್ರ ನಗರದಲ್ಲಿನ ಅಖಿಲ ಭಾರತ ವೀರಶೈವ ಮಹಾಸಭಾ ಕಾರ್ಯಾಲಯದಲ್ಲಿ ಮಂಗಳವಾರ ಮಹಾಸಭಾದ ಜಿಲ್ಲಾ ಘಟಕದ ಧ್ಯಕ್ಷ ಎ.ಎಸ್ ಕೋರಿಶೆಟ್ಟರ್ ಸ್ವಾತಂತ್ರೊೃೀತ್ಸವ ಧ್ವಜಾರೋಹಣ ನೆರವೇರಿಸಿದರು. ತಾಲೂಕು ಘಟಕದ ಅಧ್ಯಕ್ಷ ಮೃತ್ಯುಂಜಯ ಬುಕ್ಕಶೆಟ್ಟಿ, ಖಜಾಂಚಿ ಶಿವಬಸಪ್ಪ ಟೊಂಕದ, ಕಾರ್ಯದರ್ಶಿ ಕಮಲಾ ಬುಕ್ಕಶೆಟ್ಟಿ, ಲಕ್ಷ್ಮೀ ಎಳಂಬಳ್ಳಿಮಠ, ವೀರಣ್ಣ ಹರನಗೇರಿ, ಬಸವರಾಜ ಸುರದ, ವಿಜಯಸ್ವಾಮಿ ವಿರಕ್ತಮಠ, ಅಮೃತಮ್ಮ ಶೀಲವಂತರ, ರೇಖಾ ಕುರುಬಗೊಂಡ, ಅಶ್ವಿನಿ ಟೊಂಕದ, ಶಿವಬಸಮ್ಮ ಹಳ್ಳಿಕೇರಿ, ಶೈಲಜಾ ಕೋರಿಶೆಟ್ಟರ, ಇತರರಿದ್ದರು.