ಜಿಲ್ಲಾ ಮಟ್ಟದ ಕಥಾ ಕಮ್ಮಟ ಸೆ.16, 17ರಂದು

Published on

ಹಾವೇರಿ: ಬೆಂಗಳೂರಿನ ವೀರಲೋಕ ದೇಸಿ ಜಗಲಿ ವತಿಯಿಂದ ನಗರದ ಮುನ್ಸಿಪಲ್ ಮೈದಾನದ ಬಳಿಯ ಗೆಳೆಯರ ಬಳಗ ಶಾಲೆಯಲ್ಲಿ ಸೆ.16, 17ರಂದು ಜಿಲ್ಲಾ ಮಟ್ಟದ ಕಥಾ ಕಮ್ಮಟ ಆಯೋಜಿಸಲಾಗಿದೆ.
ಸೆ.16ರಂದು ಬೆಳಗ್ಗೆ 10.30ಕ್ಕೆ ಕತೆಗಾರ ಪ್ರೊ.ರಾಘವೇಂದ್ರ ಪಾಟೀಲ ಉದ್ಘಾಟಿಸಲಿದ್ದಾರೆ. ನಂತರ ಕನ್ನಡದ ಕಥನ ಪರಂಪರೆ: ಒಂದು ಅವಲೋಕನ ವಿಷಯದ ಕುರಿತು ಶ್ರೀಧರ ಬಳಿಗಾರ ಗೋಷ್ಠಿ ನಡೆಸಲಿದ್ದಾರೆ. ಮದ್ಯಾಹ್ನ 2.00ರಿಂದ ಲಿಂಗರಾಜ ಸೊಟ್ಟಪ್ಪನವರ ಕತೆಯ ಓದು ಮತ್ತು ಸಂವಾದ ಗೋಷ್ಠಿ ನಡೆಸಿಕೊಡಲಿದ್ದಾರೆ. ನಂತರ ಕಥಾ ರಚನೆ ಕುರಿತು ಮಾಹಿತಿ, ಕತೆಯ ಓದಿನ ಚರ್ಚೆ ನಡೆಯಲಿದೆ.
ಸೆ.17ರಂದು ಬೆಳಗ್ಗೆ 10 ಗಂಟೆಗೆ ಕನ್ನಡ ಕಥಾ ಸಾಹಿತ್ಯ: ಮನೋರಂಜನೆ, ವೈಚಾರಿಕತೆ ಹಾಗೂ ಕಲೆಯ ಅಭಿವ್ಯಕ್ತಿ ವಿಷಯದ ಕುರಿತು ಪ್ರೊ.ಡಿ.ಅಂಜನಪ್ಪ ಗೋಷ್ಠಿ ನಡೆಸಲಿದ್ದಾರೆ. ನಂತರ ಭಾರತೀಯ ಕಥನ ಪರಂಪರೆಯಲ್ಲಿ ಕನ್ನಡ ಕಥನ ಸಾಹಿತ್ಯ, ಸಮಕಾಲೀನ ಕನ್ನಡದ ಕತೆಗಳು, ಮತ್ತಿತರ ಗೋಷ್ಠಿಗಳು, ಸಂಜೆ ಸಮಾರೋಪ ಜರುಗಲಿವೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net