ಅಪ್ರತಿಮ ಹೋರಾಟಗಾರ ವೀರ ಸಾವರ್ಕರ್; ಸಿನಿಮಾ ನಟರನ್ನು ಬಿಟ್ಟು ಸ್ವಾತಂತ್ರೃ ವೀರರನ್ನು ಅನುಕರಿಸಿ; ಗವಿಸಿದ್ದಪ್ಪ ದ್ಯಾಮಣ್ಣನವರ ಕರೆ

28 HVR 5
Published on

ಹಾವೇರಿ: ವೀರ ಸಾವರ್ಕರ್ ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರು. ಸ್ವಾತಂತ್ರ ದೊರಕಿಸುವಲ್ಲಿ ಹಾಗೂ ಯುವಕರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಲು ಸಾವರ್ಕರ ಅವರ ಪ್ರೇರಣೆ ಅದಮ್ಯ ಎಂದು ಹಾವೇರಿ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಗವಿಸಿದ್ದಪ್ಪ ದ್ಯಾಮಣ್ಣನವರ ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ 141ನೇ ವೀರ ಸಾವರ್ಕರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ಸಾವರ್ಕರ ಅವರು ಬಾಲ್ಯದಲ್ಲಿಯೇ ದೇಶಭಕ್ತಿ ಮೈಗೂಡಿಸಿಕೊಂಡು ಯುವಕರನ್ನು ಹೋರಾಟದಲ್ಲಿ ಭಾಗವಹಿಸಲು ಪ್ರೇರಣೆ ನೀಡಿದಂಥ ಮಾಹಾನ್ ಹೋರಾಟಗಾರರು. ಬ್ರೀಟಿಷರ ಕುತಂತ್ರದಿಂದ ಕಾಲಾಪಾನಿ ಶಿಕ್ಷೆ ಅನುಭವಿಸಿ ಕಾರಾಗ್ರಹದಲ್ಲಿಯೂ ಕವನ ರಚಿಸಿ ದೇಶ ಭಕ್ತಿ ಮೆರೆದವರು. ಇಂದಿನ ಯುವಜನಾಂಗ ಚಲನಚಿತ್ರ ನಟ-ನಟಿಯರನ್ನು ಆದರ್ಶ ವ್ಯಕ್ತಿಗಳೆಂದು ಅವರನ್ನು ಅನುಸರಿಸದೇ ಸ್ವಾತಂತ್ರ ಹೋರಾಟಗಾರರನ್ನು ಆದರ್ಶ ವ್ಯಕ್ತಿಗಳೆಂದು ಅನುಸರಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಆಲದಕಟ್ಟಿ ಮಾತನಾಡಿ, ಸ್ವಾತಂತ್ರ ವೀರ ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟದ ಚಳುವಳಿಯ ವೇಗ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 1857ರ ಪ್ರಥಮ ಸಾತಂತ್ರ್ಯ ಸಂಗ್ರಾಮದ ಕುರಿತು ಪುಸ್ತಕ ಬರೆದು ರಾಷ್ಟ್ರದ್ಯಂತ ಚಳವಳಿಯ ಕಾವು ಹೆಚ್ಚಿಸಿದರು. ಸ್ವಾತಂತ್ರಾೃ ನಂತರ ಸಾವರ್ಕರ ಕುರಿತು ಕಾಂಗ್ರೆಸ್ ಪಕ್ಷ ಮರೆಮಾಚುವ ಸರ್ವಪ್ರಯತ್ನ ಮಾಡಿದರೂ ನೈಜ ದೇಶಭಕ್ತರ ಮನದಲ್ಲಿ ಅವರು ನೆಲೆಸಿದ್ದಾರೆ ಎಂದರು.
ಜಿಲ್ಲಾ ಉಪಾಧ್ಯಕ್ಷ ಸುರೇಶ ಹೊಸಮನಿ ಮಾತನಾಡಿದರು.
ನಗರ ಪ್ರಧಾನ ಕಾರ್ಯದರ್ಶಿ ಗುಡ್ಡಪ್ಪ ಭರಡಿ, ಪ್ರಭು ಹಿಟ್ನಳ್ಳಿ, ವಿಜಯಕುಮಾರ ಚಿನ್ನಿಕಟ್ಟಿ, ಕಿರಣ ಕೋಣನವರ, ಮಧು ಹಂದ್ರಾಳ, ಶಿವಯೋಗಿ ಹುಲಿಕಂತಿಮಠ, ಪುಷ್ಪಾ ಚಕ್ರಸಾಲಿ, ಜಗದೀಶ ಕೊಂಡೆಮ್ಮನವರ, ಗಿರೀಶ ಶೆಟ್ಟರ, ಈರಣ್ಣ ಹೊನ್ನಳ್ಳಿ, ಲೋಕೇಶ ಕವಾಡಿ, ಅಜಯ ಕೋಳೂರ, ಮಂಜುನಾಥ ಕುಂಚಿಕೊರವರ, ಅರ್ಜುನ ಕುಂಚಿಕೊರವರ, ದುರ್ಗೇಶ ಕುಂಚಿಕೊರವರ, ಕರುಣ ದಾವಣಗೇರಿ, ರಾಜು ಕುಂಚಿಕೊರವರ, ರವಿ ಕುಂಚಿಕೊರವರ, ಶಿವರಾಜ ಸಂಗೂರ, ಶ್ರೀಕಾಂತ ವಡ್ಡರ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net