

ಹಾವೇರಿ: ವಾಸ್ಕೋ- ಯಶವಂತಪುರ (ರೈಲು ಸಂಖ್ಯೆ 17310) ರೈಲಿನ ಮೂಲಕ ಸಾಗಿಸುತ್ತಿದ್ದ ಅಕ್ರಮ ಮದ್ಯವನ್ನು ದಾವಣಗೆರೆ ಆರ್‌ಪಿಎಫ್ ಪೊಲೀಸರು ಸೋಮವಾರ ಪತ್ತೆ ಹಚ್ಚಿದ್ದಾರೆ. ಹಾವೇರಿ- ದಾವಣಗೆರೆ ಮಧ್ಯದಲ್ಲಿ ರೈಲಿನಲ್ಲಿ ಪೊಲೀಸರು ತಪಾಸಣೆ ನಡೆಸಿದಾಗ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಮುಚ್ಚಿ ಇಟ್ಟಿದ್ದ 43,763 ರೂ. ಮೌಲ್ಯದ ಅಕ್ರಮ ಮದ್ಯ ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. ದಾವಣೆಗೆರೆ ಆರ್‌ಪಿಎಫ್ ಎಎಸ್‌ಐ ಲಕ್ಷ್ಮವ್ವ ಪಾಟೀಲ, ಜೆ.ಜಗದೀಶ, ಸಂಗೀತಾ ವೈ., ಹೋಮ್ ಗಾರ್ಡ್ ಸಿಬ್ಬಂದಿ, ಇದ್ದರು.