

ಹಾವೇರಿ: ವಯೋನಿವೃತ್ತಿ ಹೊಂದಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಚಾಲಕ ಎಚ್.ಎಂ.ನಾಯಕ ಅವರಿಗೆ ನಗರದ ಜಿಲ್ಲಾ ವಾರ್ತಾ ಭವನದಲ್ಲಿ ಸೋಮವಾರ ವಾರ್ತಾ ಇಲಾಖೆ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಬೀಳ್ಕೊಡಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಾರ್ತಾಧಿಕಾರಿ ಡಾ.ಬಿ.ಆರ್.ರಂಗನಾಥ ಮಾತನಾಡಿ, ಸರ್ಕಾರಿ ವೃತ್ತಿಯಲ್ಲಿ 29 ವರ್ಷಗಳ ಸೇವಾ ಅವಧಿ ಪೂರ್ಣಗೊಳಿಸಿದ ಚಾಲಕ ನಾಯಕ ಅವರು ಹಾವೇರಿ ವಾರ್ತಾ ಕಚೇರಿಯಲ್ಲಿ 19 ವರ್ಷ ಸೇವೆ ಸಲ್ಲಿಸಿದ್ದಾರೆ. ಯಾವಾಗಲೂ ಶಿಸ್ತು ಹಾಗೂ ತಾಳ್ಮೆಯಿಂದ ಕಾರ್ಯ ನಿರ್ವಹಿಸುವ ಮೂಲಕ ಇಲಾಖೆಯ ಘನತೆ ಹೆಚ್ಚಿಸಿದ್ದಾರೆ. ಮುಖ್ಯಮಂತ್ರಿ, ಸಚಿವರ ಕಾರ್ಯಕ್ರಮದ ಒತ್ತಡದ ಸಂದರ್ಭಗಳಲ್ಲೂ ತಾಳ್ಮೆಯಿಂದ ಎಲ್ಲರೊಂದಿಗೆ ಸ್ನೇಹಪೂರ್ವಕವಾಗಿ ನಡೆದುಕೊಂಡದ್ದನ್ನು ಸ್ಮರಿಸಿದರು.
ಮಾಧ್ಯಮ ಪ್ರತಿನಿಧಿಗಳಾದ ನಿಂಗಪ್ಪ ಚಾವಡಿ, ಫಕ್ಕೀರಯ್ಯ ಗಣಾಚಾರಿ, ನಾಗರಾಜ ಕುರುವತ್ತೇರ, ನಾರಾಯಣ ಹೆಗಡೆ, ಮಾಲತೇಶ ಅಂಗೂರ, ಸಿದ್ದು ಆರ್.ಜಿ.ಹಳ್ಳಿ, ಪವನಕುಮಾರ, ಸಂಕನಗೌಡ ಎಂ.ಸಿ, ವಿರೇಶ ಬಾರ್ಕಿ, ಪರಶುರಾಮ ಡೂಗನವರ, ಆರ್.ಜಿ ಮಹಾನುಭಾವಿಮಠ, ರವಿ ಹೂಗಾರ ಮಾತನಾಡಿದರು. ನಾಯಕರ ನಿವೃತ್ತಿ ಜೀವನ ಸುಖರವಾಗಿರಲಿ ಎಂದು ಶುಭ ಹಾರೈಸಿದರು.
ಮಾಧ್ಯಮ ಪ್ರತಿನಿಧಿಗಳಾದ ಸೂರಜ ಉತ್ತೂರೆ, ರಮೇಶ ಹುಣಸಿಮರದ, ವಿರೇಶ ಮಡ್ಲೂರ, ಶಿವಾನಂದ ಮಡಿವಾಳ, ಸುರೇಶ ನಾಯ್ಕ, ಕೊಟ್ರಯ್ಯ ಬಳ್ಳಾರಿಮಠ, ಪ್ರಭುಗೌಡ ಪಾಟೀಲ, ನಾಗರಾಜ ಮೈದೂರ, ನಿಂಗಪ್ಪ ಆರೇರ, ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.