ಶ್ರೀ ವರಮಹಾಲಕ್ಷ್ಮಿಗೆ ವಿಶೇಷ ಅಲಂಕಾರ

16 HVR 6
Published on

ಹಾವೇರಿ: ವರ ಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಶುಕ್ರವಾರ ಮಹಿಳೆಯರು, ಮುತ್ತೈದೆಯರು ಲಕ್ಷ್ಮೀದೇವಿಗೆ ವಿಶೇಷವಾಗಿ ಪೂಜೆಗೈದು, ಪ್ರಾರ್ಥನೆ ಸಲ್ಲಿಸಿದರು.
ನಸುಕಿನ ಜಾವದಿಂದಲೇ ಹಬ್ಬದ ತಯಾರಿ ನಡೆಸಿದ್ದ ಮಹಿಳೆಯರು ಮನೆಯಲ್ಲಿ ವಿಶೇಷ ಅಲಂಕಾರದ ಮೂಲಕ ಲಕ್ಷ್ಮೀ ದೇವಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದರು. ಪಾಯಸ, ಹೋಳಿಗೆ, ಇತರ ಸಿಹಿ ತಿನಿಸುಗಳನ್ನು ತಯಾರಿಸಿ ನೈವೇದ್ಯ ಸಲ್ಲಿಸಿದರು.
ನಗರದ ಹುಕ್ಕೇರಿ ಮಠ, ಪುರ ಸಿದ್ದೇಶ್ವರ, ವೀರಭದ್ರೇಶ್ವರ, ವಡ್ಡಮ್ಮದೇವಿ ದೇವಸ್ಥಾನ, ದಾನಮ್ಮದೇವಿ ಗುಡಿ, ಅಶ್ವಿನಿನಗರದ ಶಿರಡಿ ಸಾಯಿಬಾಬಾ ಮಂದಿರ, ಸೇರಿದಂತೆ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಬೆಳಗ್ಗೆಯಿಂದಲೇ ಮಹಿಳೆಯರು ದೇಗುಲಗಳಿಗೆ ಆಗಮಿಸಿ ದೇವರ ಆರ್ಶೀವಾದ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net