ವಂದೇ ಭಾರತ ರೈಲು ಹಾವೇರಿ ನಿಲುಗಡೆಗೆ ಚಾಲನೆ 11ರಂದು; ಕೇಂದ್ರ ಸಚಿವ ವಿ.ಸೋಮಣ್ಣ ಭಾಗಿ

vande bharat train
Published on

ಹಾವೇರಿ: ಇಲ್ಲಿನ ಮೈಲಾರ ಮಹದೇವಪ್ಪ ರೈಲು ನಿಲ್ದಾಣದಲ್ಲಿ ವಂದೇ ಭಾರತ ರೈಲಿನ ಪ್ರಾಯೋಗಿಕ ನಿಲುಗಡೆಗೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಏ.11ರಂದು ಮಧ್ಯಾಹ್ನ 2 ಗಂಟೆಗೆ ಚಾಲನೆ ನೀಡಲಿದ್ದಾರೆ.

ಬೆಂಗಳೂರು- ಧಾರವಾಡ ನಡುವೆ ಸಂಚರಿಸುವ ವಂದೇ ಭಾರತ ರೈಲು ಹಾವೇರಿಯಲ್ಲಿ ಎರಡು ನಿಮಿಷ ಪ್ರಾಯೋಗಿಕ ನಿಲುಗಡೆಗೆ ರೈಲ್ವೆ ಇಲಾಖೆ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ವಿ.ಸೋಮಣ್ಣ ಹಸಿರು ನಿಶಾನೆ ತೋರಿ, ಅದೇ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಸಮಯ ಇಂತಿದೆ :

ಧಾರವಾಡದಿಂದ ಬೆಂಗಳೂರಿಗೆ ತೆರಳುವ 20662 ಸಂಖ್ಯೆಯ ರೈಲು ಎಸ್‌ಎಂಎಂ ಹಾವೇರಿ ನಿಲ್ದಾಣಕ್ಕೆ ಮಧ್ಯಾಹ್ನ 2.40ಕ್ಕೆ ಆಗಮಿಸಿ, 2.42ಕ್ಕೆ ಹೊರಡಲಿದೆ. ಬೆಂಗಳೂರಿನಿಂದ ಧಾರವಾಡಕ್ಕೆ ತೆರಳುವ 20661 ಸಂಖ್ಯೆಯ ರೈಲು ಎಸ್‌ಎಂಎಂ ಹಾವೇರಿ ನಿಲ್ದಾಣಕ್ಕೆ ಬೆಳಗ್ಗೆ 10.10ಕ್ಕೆ ಆಗಮಿಸಿ, 10.12ಕ್ಕೆ ಹೊರಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net