ಬಂಕಾಪುರ, ಹಾವೇರಿ, ಕನವಳ್ಳಿ ವಾಲಿಬಾಲ್ ತಂಡಗಳಿಗೆ ಗೆಲುವು; ಮೇಜರ್ ಧ್ಯಾನ್ ಚಂದ್ ಜನ್ಮದಿನದ ಅಂಗವಾಗಿ ಕ್ರೀಡಾಸ್ಪರ್ಧೆ ಆಯೋಜನೆ

28 HVR 5
Published on

ಹಾವೇರಿ: ಮೇಜರ್ ಧ್ಯಾನ್ ಚಂದ್ ಜನ್ಮ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ನಿಮಿತ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕ್ರೀಡಾ ಇಲಾಖೆ ವತಿಯಿಂದ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಂಡಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಾಲಿಬಾಲ್ ಪಂದ್ಯಾವಳಿಯಲ್ಲಿ ಬಂಕಾಪುರ, ಹಾವೇರಿ, ಕನವಳ್ಳಿ ವಾಲಿಬಾಲ್ ತಂಡಗಳು ಗೆಲುವು ಸಾಧಿಸಿದವು.
ಪುರುಷ ವಾಲಿಬಾಲ್ ತಂಡದಲ್ಲಿ ಎಂಟು ತಂಡಗಳು ಭಾಗವಹಿಸಿದ್ದು, ಈ ಪೈಕಿ ಬಂಕಾಪೂರ ಗೋಲ್ಡನ್ ವಾಲಿಬಾಲ್ ಸ್ಟೋಟ್ಸ್ ಕ್ಲಬ್ ಪ್ರಥಮ ಸ್ಥಾನ, ಹಾವೇರಿ ವಾಲಿಬಲ್ ಸ್ಟೋಟ್ ಕ್ಲಬ್ ದ್ವೀತೀಯ ಹಾಗೂ ಕನವಳ್ಳಿ ಆಜಾದ್ ಸ್ಪೋಟ್ಸ್ ಕ್ಲಬ್ ಮತ್ತು ಜೆ.ಎಚ್. ಕಾಲೇಜು ಪ.ಪೂ. ಕಾಲೇಜು ತೃತೀಯ ಸ್ಥಾನ ಹಂಚಿಕೊಂಡಿವೆ.
ಸ್ಪರ್ಧೆಯಲ್ಲಿ ಕನವಳ್ಳಿ ಆಜಾದ್ ಸ್ಟೋಟ್ಸ್ ಕಬ್ಲ್, ಅಗಡಿ ಗೋಲ್ಡನ್ ಈಗಲ್ ವಾಲಿಬಾಲ್ ಸ್ಟೋಟ್ ಕ್ಲಬ್, ಬಂಕಾಪೂರ ಗೋಲ್ಡನ್ ವಾಲಿಬಾಲ್ ಕ್ಲಬ್, ಹಾವೇರಿಯ ವಾಲಿಬಾಲ್ ಸ್ಟೋಟ್ ಕ್ಲಬ್, ಹಾವೇರಿ ನಗರದ ಎಸ್.ಎಂ.ಎಸ್. ಪ.ಪೂ. ಕಾಲೇಜ್, ಸರ್ಕಾರಿ ಪ.ಪೂ.ಕಾಲೇಜು, ಜೆ.ಎಚ್.ಕಾಲೇಜ್ ಹಾಗೂ ಲಕಮಾಪೂರ ವಿವೇಕಾನಂದ ಸ್ಟೋಟ್ಸ್ ಕ್ಲಬ್ ತಂಡಗಳು ಭಾಗವಹಿಸಿದ್ದವು.
ಸೌಹಾರ್ದ ಕ್ರಿಕೆಟ್ ಪಂದ್ಯ ಸೆ.3ರಂದು
ಆ.29ರಂದು ಪುರುಷರ ಹಾಗೂ ಮಹಿಳೆಯರ ಹಗ್ಗ ಜಗ್ಗಾಟ, ಮಹಿಳೆಯರಿಗೆ ಬಾಂಬ್ ಇನ್‌ದ ಸಿಟಿ ಕ್ರೀಡಾ ಸ್ಪರ್ಧೆಗಳು ಜರುಗಲಿವೆ. ಸೆಪ್ಟೆಂಬರ್ 3ರಂದು ವಿಧಾನಸಭೆ ಉಪ ಸಭಾಪತಿಯವರ ನೇತೃತ್ವದ ತಂಡ, ಜಿಲ್ಲಾಧಿಕಾರಿಯವರ ನೇತೃತ್ವದ ತಂಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ನೇತೃತ್ವದ ತಂಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ನೇತೃತ್ವದ ತಂಡ ಹಾಗೂ ಮಾಧ್ಯಮ ತಂಡಗಳ ನಡುವೆ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net