

ಹಾವೇರಿ: ಇಲ್ಲಿನ ಶಿವಾಜಿ ನಗರದ ಪಿಬಿ ರಸ್ತೆಯ ಶ್ರೀ ಭುವನೇಶ್ವರಿ (ವಡ್ಡಮ್ಮ) ದೇವಿ ದೇವಸ್ಥಾನದಲ್ಲಿ ಐದನೇ ವರ್ಷದ ಶರನ್ನವರಾತ್ರಿ ಉತ್ಸವ ಅ.3ರಿಂದ ಅ.12ರವರೆಗೆ ಜರುಗಲಿದೆ.
ಪ್ರತಿ ದಿನವೂ ದೇವಿಗೆ ಒಂದೊಂದು ಬಗೆಯ ಅಲಂಕಾರ, ವಿಶೇಷ ಪೂಜೆ ನೆರವೇರಲಿದೆ. ಭಸ್ಮ, ಗಂಧ, ಅರಿಷಿಣ, ಕುಂಕುಮ, ಮಿಂಚು, ಬುತ್ತಿ, ಬೆಣ್ಣೆ , ವರ್ಣ, ನಾಣ್ಯ, ತರಕಾರಿ ಹಾಗೂ ಪುಷ್ಪಾಲಂಕಾರಗಳು ನೆರವೆರಲಿವೆ. ಪ್ರತಿದಿನ ಸಂಜೆ 6.30ಕ್ಕೆ ಕುಂಕುಮಾರ್ಚನೆ, ಮಹಾಮಂಗಳಾರತಿ ನಡೆಯಲಿದೆ.
ಅ.3ರಂದು ಸಂಜೆ 6.30ಕ್ಕೆ ದೀಪ ಬೆಳಗಿಸಿ, ಘಟ ಸ್ಥಾಪನೆಯೊಂದಿಗೆ ಚಾಲನೆ ನೀಡಲಾಗುವುದು. ಅ.11ರಂದು ದುರ್ಗಾಷ್ಟಮಿ ದಿನ ಶ್ರೀ ದುರ್ಗಾ ಹೋಮ, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಬಣ್ಣದ ಮಠದ ಶ್ರೀ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ಪ್ರಧಾನ ಅರ್ಚಕ ಶಿದ್ದಲಿಂಗಯ್ಯಶಾಸ್ತ್ರಿ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.