

ಹಾವೇರಿ: ಇಲ್ಲಿನ ಶಿವಾಜಿನಗರ ಹಳೇ ಪಿಬಿ ರಸ್ತೆಯ ಶ್ರೀ ಭುವನೇಶ್ವರಿ (ವಡ್ಡಮ್ಮ) ದೇವಿ ದೇವಸ್ಥಾನದ ನೂತನ ಶಿಲಾ ಮಂಟಪದ ಗುದ್ದಲಿ ಪೂಜೆ ಸಮಾರಂಭ ಆ.4ರಂದು ಬೆಳಗ್ಗೆ 10.25ಕ್ಕೆ ನಡೆಯಲಿದೆ.
ಹರಸೂರು ಬಣ್ಣದ ಮಠದ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದು, ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ರುದ್ರಪ್ಪ ಲಮಾಣಿ, ಸಂಜೀವಕುಮಾರ ನೀರಲಗಿ, ಶಶಿಕಲಾ ಮಾಳಗಿ, ಚನ್ನಮ್ಮ ಬ್ಯಾಡಗಿ, ಪೂಜಾ ಹಿರೇಮಠ, ರುದ್ರಪ್ಪ ಕಮ್ಮಾರ, ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಚಂದ್ರಶೇಖರ ಮುದಕಣ್ಣನವರ, ಅಧ್ಯಕ್ಷ ಭರಮಪ್ಪ ಚೂರಿ, ಇತರರು ಭಾಗವಹಿಸಲಿದ್ದಾರೆ ಎಂದು ಪ್ರಧಾನ ಅರ್ಚಕ ಶಿದ್ದಲಿಂಗಯ್ಯ ಶಾಸ್ತ್ರೀ ಹಿರೇಮಠ ಪ್ರಕಟಣೆ ಮೂಲಕ ತಿಳಿಸಿದ್ದಾರೆ.