ಹಾವೇರಿ: ಹಾವೇರಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ 2024-2029ರ ಅವಧಿಗೆ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಗುರುಬಸಪ್ಪ (ಅಜಿತ್) ಎಸ್. ಮಾಗಾವಿ ಮತ್ತು ಉಪಾಧ್ಯಕ್ಷರಾಗಿ ಅಶೋಕ ಎಸ್. ಹೇರೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 13 ಸದಸ್ಯರು ನಿರ್ದೇಶಕರಾಗಿ 5 ವರ್ಷದ ಅವಧಿಗೆ ಆಯ್ಕೆಯಾಗಿದ್ದಾರೆ. ಸಾಮಾನ್ಯ ನಿರ್ದೇಶಕರ ಸ್ಥಾನಕ್ಕೆ ಗುರುಬಸಪ್ಪ ಶಿದ್ದೇಶ್ವರ ಮಾಗಾವಿ, ಅಶೋಕ ಶಿವಪ್ಪ ಹೇರೂರ, ರಾಜಶೇಖರ ಚನಬಸಪ್ಪ ಮಾಗಾವಿ, ಅಶೋಕ ಚನಬಸಪ್ಪ ನೀರಲಗಿ, ಶಂಭುಲಿಂಗಪ್ಪ ಗದಿಗೆಪ್ಪ ಮಹಾಂತ, ಚನಬಸಪ್ಪ ಗುದ್ಲೆಪ್ಪ ತೋಟಣ್ಣನವರ, ಶಿವಯೋಗಿ ಹುಚ್ಚಪ್ಪ ವಾಲಿಶೆಟ್ಟರ ಆಯ್ಕೆಯಾಗಿದ್ದಾರೆ.
ಪ.ಜಾ ಮೀಸಲು ಸ್ಥಾನದಿಂದ ಕೋಟೆಪ್ಪ ಮಲ್ಲಾರೆಪ್ಪ ಸ್ವಾದಿ, ಪ.ಪಂ ಮೀಸಲು ಸ್ಥಾನದಿಂದ ಶಿವಾನಂದ ಹನುಮಂತಪ್ಪ ಭೀಮಕ್ಕನವರ, ಮಹಿಳಾ ಮೀಸಲು ಸ್ಥಾನದಿಂದ ನೀಲವ್ವ ಬಸವರಾಜ ಯರೇಶೀಮಿ ಮತ್ತು ನಿರ್ಮಲಾ ಬಾಲಚಂದ್ರ ಹಂದ್ರಾಳ ಹಾಗೂ ಹಿಂದುಳಿದ ಅ ವರ್ಗ ಮೀಸಲು ಸ್ಥಾನದಿಂದ ಸೋಮನಾಥ ಸಣ್ಣೀರಪ್ಪ ಕುದರಿ ಮತ್ತು ಹಿಂದುಳಿದ ಬ ವರ್ಗದಿಂದ ರವೀಂದ್ರ ಬಂಗಾರೆಪ್ಪ ಹಿಂಚಿಗೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ಎಸ್.ಜಿ.ಸುಣಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.