

ಹಾವೇರಿ: ತಾಲೂಕು ಕೆರಿಮತ್ತಿಹಳ್ಳಿಯ ಹಾವೇರಿ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ಯೋಗ ಶಿಕ್ಷಕರಾದ ಪ್ರೇಮಕುಮಾರ ಮುದ್ದಿ, ಕಾವ್ಯಾ ಶೀಲವಂತರ ಆಸನಗಳನ್ನು ಹೇಳಿಕೊಟ್ಟರು. ವಿವಿ ಕುಲಪತಿ ಪ್ರೊ.ಸುರೇಶ ಜಂಗಮಶೆಟ್ಟಿ, ಕುಲಸಚಿವರಾದ ಡಾ.ಎಸ್.ಟಿ.ಬಾಗಲಕೋಟಿ, ಡಾ.ವಿಜಯಲಕ್ಷ್ಮೀ ತಿರ್ಲಾಪುರ, ವಿಶ್ವನಾಥ ಚಿಂತಾಮಣಿ, ಇತರರಿದ್ದರು.