ಹಾವೇರಿ ವಿವಿ ಫಲಿತಾಂಶ ಪ್ರಕಟ

26 HVR 2
Published on

ಹಾವೇರಿ: ಇಲ್ಲಿನ ಕೆರಿಮತ್ತಿಹಳ್ಳಿಯ ಹಾವೇರಿ ವಿಶ್ವವಿದ್ಯಾಲಯದ 2023-24ನೇ ಸಾಲಿನ ಪದವಿ ಮತ್ತು ಬಿಪಿಎಡ್ ಎರಡನೇ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶವನ್ನು ಮಂಗಳವಾರ ಕುಲಪತಿ ಪ್ರೊ.ಸುರೇಶ ಜಂಗಮಶೆಟ್ಟಿ ಪ್ರಕಟಿಸಿದರು.
ಇನ್ನು ಮುಂದೆ ಯು.ಯು.ಸಿ.ಎಂ.ಎಸ್.ನಲ್ಲಿ ಎಲ್ಲ ಫಲಿತಾಂಶಗಳು ಲಭ್ಯವಿದ್ದು, ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ಕುಲಪತಿ ಹೇಳಿದರು.
ಮೌಲ್ಯಮಾಪನ ಕುಲಸಚಿವೆ ಡಾ.ವಿಜಯಲಕ್ಷ್ಮೀ ತಿರ್ಲಾಪೂರ, ಪರೀಕ್ಷಾ ಸಂಯೋಜಕ ಗಣೇಶ ಹೊಸಪೇಟೆ, ಓ.ಎಸ್.ಚಿಕ್ಕುಂಬಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net