ತುಂಗಭದ್ರ ನೀರಿನ ಸಂಗ್ರಹ ಕಡಿಮೆ; ಮಿತವಾಗಿ ನೀರು ಬಳಸಲು ಹಾವೇರಿ ನಗರಸಭೆ ಮನವಿ

Published on

ಹಾವೇರಿ: ತುಂಗಭದ್ರ ನದಿಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿರುವ ಕಾರಣ ಕಂಚಾರಗಟ್ಟಿ ಜಾಕ್‌ವೆಲ್‌ದಿಂದ ನಗರಕ್ಕೆ ನೀರು ಸರಬರಾಜಾಗುವ ಚಾಕ್‌ವೆಲ್‌ನ ನೀರಿನ ಒಳಹರಿವು ಕಡಿಮೆಯಾಗಿದೆ. ಕಾರಣ ನಾಗರಿಕರಿಗೆ ನೀರು ಸರಬರಾಜು ಮಾಡಲು ತೊಂದರೆ ಉಂಟಾಗುತ್ತಿದೆ.
ಪರ್ಯಾಯವಾಗಿ ನಗರದಲ್ಲಿರುವ 430 ಕೊಳವೆಬಾವಿಗಳ ಮುಖಾಂತರ ನಿರಂತರ ನೀರು ಸರಬರಾಜು ಮಾಡಲಾಗುವುದು. ಸಾರ್ವಜನಿಕರು ನೀರನ್ನು ಮಿತವಾಗಿ ಬಳಸುವುದರ ಮೂಲಕ ನಗರಸಭೆಯೊಂದಿಗೆ ಸಹಕರಿಸುವಂತೆ ಪೌರಾಯುಕ್ತ ಪರಶುರಾಮ ಚಲವಾದಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net