

ತುಮ್ಮಿನಕಟ್ಟಿ: ಗ್ರಾಮದ ಶ್ರೀ ಸಂಗನಬಸವೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ 2000-01ನೇ ಸಾಲಿನ ಸ್ನೇಹಲೋಕ ವಿದ್ಯಾರ್ಥಿ ಬಳಗದಿಂದ ಭಾನುವಾರ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಜರುಗಿತು.
ನಿವೃತ್ತ ಪ್ರಾಂಶುಪಾಲರಾದ ಆರ್.ಸಿ.ದೊಡ್ಡಗೌಡ್ರ ಸಮಾರಂಭ ಉದ್ಘಾಟಿಸಿ, ಮಾತನಾಡಿದರು.
ನಿವೃತ್ತ ಉಪನ್ಯಾಸಕರಾದ ಆರ್.ಸಿ.ದೊಡ್ಡಗೌಡ್ರ, ಸುನೀಲ ಶೆಟ್ಟರ್, ಹೇಮಪ್ಪ ಕಚರಬಿ, ವಿಶ್ವನಾಥ ನರೇಗಲ್ಲಮಠ, ಹೇಮಪ್ಪ ಕಸಗೂರು, ಶಾಂತಪ್ಪ ದೊಡ್ಡಮನಿ, ಸೇರಿದಂತೆ ಇತರ ಉಪನ್ಯಾಸಕರಿಗೆ ಸ್ನೇಹಲೋಕ ವಿದ್ಯಾರ್ಥಿಗಳಿಂದ ಸನ್ಮಾನಿಸಿ ಗುರುವಂದನೆ ಸಲ್ಲಿಸಲಾಯಿತು.
ಸಮಾರಂಭದಲ್ಲಿ ವೃತ್ತಿ ನಿರತ ಉಪನ್ಯಾಸಕರು ಮತ್ತು ಪ್ರೌಢಶಾಲಾ ಶಿಕ್ಷಕರು, ಗಜಾನನ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ಚಂದ್ರು ಹೆಗಡಾಳ, ನಂದೀಶ ಶಿಡ್ಲಳ್ಳಿ, ಗಣೇಶ ಶೇಷಗಿರಿ, ಎಸ್.ಐ.ಶೆಟ್ಟಿಕೇರಿ, ಇ.ಎಂ.ಪಾಟೀಲ, ಚಂದ್ರಶೇಖರ ಬಣಕಾರ, ಕುಮಾರ ಕರಿಯಜ್ಜಿ, ಚಂದ್ರು ಉಪ್ಪಿನ, ಗಣೇಶ ಗುಂಡೇರ, ಬಸವರಾಜ ಹುಲ್ಮನಿ, ಸಂಗಮೇಶ ಕಟ್ಟಿ, ಯಲ್ಲಪ್ಪ ಕೆ., ರಾಜೇಶ್ವರಿ ಕುಸಗೂರ, ಪದ್ಮಾವತಿ ಗುರುಂ, ಆಶಾ ಬೇಲೂರಪ್ಪನವರ, ಸೌಭಾಗ್ಯ, ವೀಣಾ ಹಾದಿಮನಿ, ಲಕ್ಷ್ಮೀ ಶೆಟ್ಟರ್, ಇತರರು ಪಾಲ್ಗೊಂಡಿದ್ದರು.
ಮೂವರಿಗೆ ಪ್ರಶಸ್ತಿ ವಿತರಣೆ
ಕಾರ್ಯಕ್ರಮದಲ್ಲಿ ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಸಂಗಮೇಶ ಕಟ್ಟಿ ಅವರಿಗೆ ‘ಶಿಕ್ಷಣ ಶಿಲ್ಪಿ’ ಪ್ರಶಸ್ತಿ ನೀಡಲಾಯಿತು. ರಕ್ಷಣೆ ಕ್ಷೇತ್ರದ ಬಸವರಾಜ ಜಿ.ಟಿ. ಅವರಿಗೆ ‘ರಕ್ಷಣೆಯ ಕಲ್ಪ’ ಪ್ರಶಸ್ತಿ ಹಾಗೂ ಕೃಷಿ ಕ್ಷೇತ್ರದಲ್ಲಿ ರೈತ ಶಿವಾನಂದ ರಾಮಪ್ಪ ಗುರುಂ ಅವರಿಗೆ ‘ನೇಗಿಲಯೋಗಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.