ಚಲಿಸುತ್ತಿದ್ದ ರೈಲಿಂದ ಬಿದ್ದು ಅಪರಿಚಿತ ಸಾವು

Published on

ಹಾವೇರಿ: ಹಾವೇರಿ-ಬ್ಯಾಡಗಿ ರೈಲು ನಿಲ್ದಾಣ ಮಧ್ಯದಲ್ಲಿ ಇತ್ತೀಚೆಗೆ ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಬಿದ್ದು ಸುಮಾರು 55ರಿಂದ 60 ವರ್ಷದ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾರೆ.

ಮೃತರ ಗುರುತು ಪತ್ತೆಯಾಗಿಲ್ಲ. ಮೃತ ವ್ಯಕ್ತಿ 5.2 ಅಡಿ ಎತ್ತರ, ಬಿಳಿ ಬಣ್ಣ, ನೇರ ಮೂಗು ಹೊಂದಿದ್ದು, ಬೂದು ಬಣ್ಣದ ಹಾಪ್ ಟೀ ಶರ್ಟ್, ಕಪ್ಪು ನೀಲಿ ಬಣ್ಣದ ಚೆಕ್ಸ್ ಮಿಶ್ರಿತ ಲುಂಗಿ, ಬೂದಿ ಬಣ್ಣದ ಸ್ವೆಟರ್ ಧರಿಸಿದ್ದಾನೆ. ಇವರ ವಾರಸುದಾರು ಯಾರಾದರೂ ಇದ್ದಲ್ಲಿ ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆ ದೂ.ಸಂ. 0836-2364751 ಸಂಪರ್ಕಿಸಬಹುದು ಎಂದು ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net