ಬೈಕ್ ಕಳ್ಳನ ಬಂಧನ, 6 ಬೈಕ್ ವಶಕ್ಕೆ

1 Haveri Bike kallaru
Published on

ಹಾವೇರಿ: ಇಲ್ಲಿನ ಶಹರ ಠಾಣೆ ಪೊಲೀಸರು ಬೈಕ್ ಕಳ್ಳನನ್ನು ಬಂಧಿಸಿ, ಆತನಿಂದ 1.40 ಲಕ್ಷ ರೂ. ಮೌಲ್ಯದ 6 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಬ್ಯಾಡಗಿ ತಾಲೂಕು ಕಾಗಿನೆಲೆಯ ಹೊಂಡದ ಓಣಿ ನಿವಾಸಿ ಚಾಂದಭಾಷಾ ಅಬ್ದುಲ್ ಸತ್ತಾರ ಶಿಕಾರಿಪುರ ಬಂಧಿತ ಆರೋಪಿ. ಹಾವೇರಿ ಶಹರ, ಹುಬ್ಬಳ್ಳಿ ಗೋಕುಲ ಹಾಗೂ ಹಾನಗಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿರುವುದು ಪತ್ತೆಯಾಗಿದೆ.

ಎಸ್‌ಪಿ ಅಂಶುಕುಮಾರ ಮಾರ್ಗದರ್ಶನದಲ್ಲಿ ಎಎಸ್‌ಪಿ ಎಲ್.ವೈ ಶಿರಕೋಳ ಹಾಗೂ ಡಿವೈಎಸ್‌ಪಿ ಎಂ.ಎಸ್ ಪಾಟೀಲ ನೇತೃತ್ವದಲ್ಲಿ ಶಹರ ಠಾಣೆ ಪಿಐ ಮೋತಿಲಾಲ ಪವಾರ, ಪಿಎಸ್‌ಐಗಳಾದ ಪಿ.ಡಿ ಆರೇರ, ಎಂ.ಕೆ ಸೊರಟೂರ, ಬಿ.ಜಿ ದೊಡ್ಡಮನಿ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ. ಈ ತಂಡಕ್ಕೆ ಎಸ್‌ಪಿ ಬಹುಮಾನ ಘೋಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net