ಕೆಂಡದಂತಾಗಿದ್ದ ಭುವಿಗೆ ತಂಪೆರೆದ ವರುಣ; ಜಿಲ್ಲೆಯ ಹಲವೆಡೆ ಗುಡುಗು ಸಹಿತ ಮಳೆ

H6 HVR 9
Published on

ಹಾವೇರಿ: ಮುಂಗಾರು ಮಳೆಯಂತೆ ಹಿಂಗಾರು ಮಳೆಯೂ ಕೈಕೊಟ್ಟ ನಂತರ ಕಾದು ಕೆಂಡದಂತಾಗಿದ್ದ ಭೂಮಿಗೆ ವರುಣದೇವ ಸೋಮವಾರ ತಂಪೆರೆದ.
ಹಾವೇರಿ ಶಹರ, ಸವಣೂರ, ಬ್ಯಾಡಗಿ, ರಾಣೆಬೆನ್ನೂರ, ಬಂಕಾಪುರ, ಸೇರಿದಂತೆ ಜಿಲ್ಲೆಯ ವಿವಿಧೆಡೆ ಸುಮಾರು ಒಂದು ತಾಸು ರಭಸವಾಗಿ ಗುಡುಗು ಸಹಿತ ಮಳೆ ಸುರಿಯಿತು. ಒಂದು ತಿಂಗಳಿನಿಂದ ಪ್ರಖರವಾದ ಸೂರ್ಯನ ಶಾಖದಿಂದ ಕಾದ ಹಂಚಿನಂತಾಗಿದ್ದ ಭೂಮಿಗೆ ತುಸು ತಂಪೆರೆದಂತಾಯಿತು.
ಹಾವೇರಿ ಶಹರದ ರಾಜ ಕಾಲುವೆ ಸೇರಿ, ಚರಂಡಿಗಳು ತುಂಬಿ ರಸ್ತೆ ಮೇಲೆ ನೀರು ಹರಿಯಿತು. ರಸ್ತೆ ಬದಿ ನಿಲ್ಲಿಸಿದ್ದ ದ್ವಿಚಕ್ರವಾಹನಗಳು ನೀರಿನಿಂದ ಆವೃತವಾಗಿದ್ದವಯ. ಕೆಲಕಾಲ ಸಂಚಾರ ಅಸ್ವವ್ಯಸ್ತಗೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net