

ಹಾವೇರಿ: ಸಹಕಾರಂ ಗೆಲ್ಗೆ ಎಂಬ ನಾಣ್ಣುಡಿಯಂತೆ ಎಲ್ಲ ಸದಸ್ಯರ ಒಗ್ಗಟ್ಟಿನ ಫಲದಿಂದ ಸಂಘಗಳು ಬೆಳೆಯುತ್ತವೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಿದ್ದರಾಮಪ್ಪ ಬರಗಿಮಠ ಹೇಳಿದರು.
ಇಲ್ಲಿನ ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ತೋಟಗಾರಿಕೆ ಬೆಳೆಗಾರರ ಉತ್ಪನ್ನ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ ನಾಲ್ಕನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಸಹಾಯಕ ತೋಟಗಾರಿಕೆ ಉಪನಿರ್ದೇಶಕ ಹಾಗೂ ಸಂಘದ ವ್ಯವಸ್ಥಾಪಕ ನಿರ್ದೇಶಕ ಶಂಕರಪ್ಪ ಅರಿಕಟ್ಟಿ ಹಾಗೂ ಸಂಘದ ಅಧ್ಯಕ್ಷ ಬಸವರಾಜ ಕುಲಮಿ ಮಾತನಾಡಿದರು.
ಸಂಘದ ಉಪಾಧ್ಯಕ್ಷ ಕೆ.ಜಿ.ಹೆರೂರ ಸ್ವಾಗತಿಸಿದರು. ಸಂಘದ ನಿರ್ದೇಶಕ ನವೀನ ಹೆರೂರ ಲೆಕ್ಕಪತ್ರ ದಾಖಲೆ ವಿವರಿಸಿದರು. ಕಾರ್ಯದರ್ಶಿ ಎಂ.ಬಿ.ಬೇವಿನಹಳ್ಳಿ, ವ್ಯವಸ್ಥಾಪಕ ಪಿ.ಜಿ.ಹಿರೇಮಠ, ಇತರರು ಪಾಲ್ಗೊಂಡಿದ್ದರು.