ದೇಹದ ಸದಢೃತೆಗೆ ಮಾನಸಿಕ ಆರೋಗ್ಯ ಮುಖ್ಯ; ಕೆ.ಎಫ್.ಕೃಷ್ಣಪ್ಪ

13 HVR 5
Published on

ಹಾವೇರಿ: ನಮ್ಮ ಯೋಗಕ್ಷೇಮಕ್ಕೆ ಸಮಾನವಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಮುಖ್ಯ. ದೈಹಿಕ ಮತ್ತು ಮಾನಸಿಕ ಆರೋಗ್ಯವು ಸಾಮಾನ್ಯವಾಗಿ ಜತೆ ಜತೆಯಾಗಿ ಇರುತ್ತವೆ. ಗ್ರಾಮಗಳು ರೋಗ್ಯವಂತ ಜನರನ್ನು ನಿರ್ಮಾಣ ಮಾಡಬೇಕು ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎಫ್.ಕೃಷ್ಣಪ್ಪ ಹೇಳಿದರು.
ತಾಲೂಕಿನ ತಿಮ್ಮೇನಹಳ್ಳಿ ಗ್ರಾಮದಲ್ಲಿ ಬುಧವಾರ ಬೂದಗಟ್ಟಿ ಗ್ರಾಮ ಪಂಚಾಯಿತಿ, ಆರೋಗ್ಯ ಮತ್ತು ಕ್ಷೇಮ ಕೇಂದ್ರ ಹಾಗೂ ಗ್ರಾಮ ಆರೋಗ್ಯ ಅಭಿಯಾನ ಜಂಟಿಯಾಗಿ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾನಸಿಕ ಒತ್ತಡಗಳನ್ನು ಸಮರ್ಥವಾಗಿ ನಿಭಾಸಯಿಸಬೇಕು. ಮಾನಸಿಕ ಆರೋಗ್ಯವು ವ್ಯಕ್ತಿಯ ಭಾವನಾತ್ಮಕ, ಮಾನಸಿಕ ಮತ್ತು ಸಾಮಾಜಿಕ ಯೋಗಕ್ಷೇಮವನ್ನು ಸೂಚಿಸುತ್ತದೆ. ಮಾನಸಿಕ ಆರೋಗ್ಯ ಸಾರ್ವತ್ರಿಕ ಮಾನವ ಹಕ್ಕು ಎಂದು ಮಾತನಾಡಿದರು.
ಸಮುದಾಯ ಆರೋಗ್ಯ ಅಧಿಕಾರಿ ಸಾವಿತ್ರಿ ಕಲ್ಯಾಣಿ ಮಾತನಾಡಿ, ವ್ಯಕ್ತಿಯು ಒತ್ತಡವನ್ನು ಹೇಗೆ ನಿಭಾಯಿಸುತ್ತಾನೆ. ಹೇಗೆ ತೆಗೆದುಕೊಳ್ಳುತ್ತಾನೆ ಎಂಬುದರ ಮೇಲೆ ಮಾನಸಿಕ ಆರೋಗ್ಯ ಪ್ರಭಾವ ಬೀರುತ್ತದೆ. ಬಾಲ್ಯ, ಹದಿಹರೆಯದಿಂದ ಪ್ರೌಢಾವಸ್ಥೆ ಮತ್ತು ವೃದ್ಧಾಪ್ಯದವರೆಗೆ ಜೀವನದ ಪ್ರತಿಯೊಂದು ಹಂತದಲ್ಲಿ ಮಾನಸಿಕ ಆರೋಗ್ಯವು ನಿರ್ಣಾಯಕವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಗ್ರಾಮ ಆರೋಗ್ಯ ಅಭಿಯಾನದ ತಾಲೂಕು ಸಂಯೋಜಕಿ ರೇಣುಕಾ ಕಹಾರ ಮಾತನಾಡಿದರು. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶಬ್ಬಿರ್ ಅಹ್ಮದ್ ಎಣ್ಣಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಸ್ಪತ್ರೆ ಆಪ್ತ ಸಮಾಲೋಚಕಿ ವೈಶಾಲಿ ಎಸ., ನೀರಗಂಟಿ ರುದ್ರಗೌಡ ರಾಮನಗೌಡ್ರ, ಆಶಾ ಕಾರ್ಯಕರ್ತರಾದ ರೇಣುಕಾ ಬಂಕಾಪೂರ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net