ತಿಳವಳ್ಳಿಯಲ್ಲಿ ಅಕ್ರಮ ಪಡಿತರ ಜಪ್ತಿ

Published on

ಹಾನಗಲ್ಲ: ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿ ಮಾರಾಟ ಮಾಡಲು ಮುಂದಾಗಿದ್ದ ತಂಡದ ಮೇಲೆ ಆಹಾರ ಇಲಾಖೆ ತಂಡ ತಾಲೂಕಿನ ತಿಳವಳ್ಳಿ ಗ್ರಾಮದ ಪಾಂಡುರಂಗ ದೇಗುಲದ ಬಳಿ ಶನಿವಾರ ದಾಳಿ ನಡೆಸಿ, 1.35 ಲಕ್ಷ ರೂ. ಮೌಲ್ಯದ 45 ಕ್ವಿಂಟಲ್ ಅಕ್ಕಿ ಹಾಗೂ ಲಾರಿಯನ್ನು ಜಪ್ತಿ ಮಾಡಿದೆ.

ಆರೋಪಿತರಾದ ಅಕ್ಕಾಲೂರಿನ ಅನೀಲಕುಮಾರ ಮಾಳಗಿ ಹಾಗೂ ಸುರೇಶ ಬಂಕಾಪುರ ಎಂಬುವರು ಅನ್ನಭಾಗ್ಯ ಯೋಜನೆಯಡಿ ವಿತರಿಸುವ ಪಡಿತರ ಅಕ್ಕಿಯನ್ನು ಎಲ್ಲಿಂದಲೋ ಅಕ್ರಮವಾಗಿ ಸಂಗ್ರಹಿಸಿದ್ದರು. ಅದನ್ನು ಮಾರಾಟ ಮಾಡುವ ದುರುದ್ದೇಶದಿಂದ 4,500 ಕೆಜಿ ಅಕ್ಕಿಯನ್ನು 100 ಚೀಲಗಳಲ್ಲಿ ತುಂಬಿಕೊಂಡು ಹೊರಟಿದ್ದರು. ಮಾರಾಟ ಮಾಡಲು ಮುಂದಾಗಿದ್ದರು. ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆ ಶಿರಸ್ತೇದಾರ ವೆಂಕಟೇಶ ದೊಡ್ಡಮನಿ, ಪೊಲೀಸ್ ಇಲಾಖೆ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಈ ಕುರಿತು ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net