ಕಾಂತಾರ ಸಿನಿಮಾ ವೀಕ್ಷಣೆ ವೇಳೆ ಮಹಿಳೆಗೆ ದೈವಾವೇಶ ?

3 HVR 4
Published on

ಹಾವೇರಿ: ನಗರದ ಚಿತ್ರಮಂದಿರ ಒಂದರಲ್ಲಿ ಕಾಂತಾರ ಸಿನಿಮಾ ವೀಕ್ಷಿಸುತ್ತಿದ್ದಾಗ ಮಹಿಳೆಯೊಬ್ಬರ ಮೈಮೇಲೆ ದೈವಾವೇಶ ಕಾಣಿಸಿಕೊಂಡಂತೆ ವರ್ತಿಸಿದ ವಿಡಿಯೋ ವೈರಲ್ ಆಗಿದೆ.

ನಗರದ ಮಾಗಾವಿ ಚಿತ್ರಮಂದಿರದಲ್ಲಿ ಗುರುವಾರ ಕಾಂತಾರ ಚಾಪ್ಟರ್ 1 ಸಿನಿಮಾ ವೀಕ್ಷಣೆ ವೇಳೆ ರಿಷಬ್ ಶೆಟ್ಟಿ ಅವರ ದೈವದ ದೃಶ್ಯದ ವೇಳೆ ಮಹಿಳೆಯೊಬ್ಬರಿಗೆ ದೈವಾವೇಶ ಕಾಣಿಸಿಕೊಂಡಂತೆ ವರ್ತಿಸಿದ್ದಾರೆ. ಇದನ್ನು ಕಂಡು ಅಕ್ಕಪಕ್ಕದಲ್ಲಿ ಇದ್ದ ಪ್ರೇಕ್ಷಕರು ಅಚ್ಚರಿಗೊಂಡಿದ್ದಾರೆ. ಮಹಿಳೆಯ ಮುಖಕ್ಕೆ ನೀರು ಸಿಂಪಡಿಸಿ ಸಮಾಧಾನಪಡಿಸಿದ್ದಾರೆ. ಈ ವಿಡಿಯೋ ಈಗ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net