

ಹಾವೇರಿ: ತಾಲೂಕಿನ ಟಾಟಾ ಮಣ್ಣೂರ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಕಟ್ಟಡ ನಿರ್ಮಾಣಕ್ಕೆ ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ ಮಂಗಳವಾರ ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಮುಜರಾಯಿ ಇಲಾಖೆ ಆಂಜನೇಯ ಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ 10 ಲಕ್ಷ ರೂ. ಅನುದಾನ ಕೊಟ್ಟಿದೆ. ಗ್ರಾಮಸ್ಥರು ಇದರ ಸದ್ಬಳಕೆ ಪಡೆದು ಭವ್ಯವಾದ ದೇವಸ್ಥಾನ ನಿರ್ಮಾಣ ಮಾಡಬೇಕು ಎಂದು ಹೇಳಿದರು.
ರಾಜ್ಯ ಸರ್ಕಾರ ಗ್ರಾಮೀಣ ಭಾಗದ ಜನರಿಗೆ ಹಲವಾರು ಯೋಜನೆಗಳನ್ನು ಕಲ್ಪಿಸಿದ್ದು, ಗ್ರಾಮೀಣ ಜನರ ಜೀವನ ಗುಣಮಟ್ಟ ಸುಧಾರಿಸಲು ಶ್ರಮಿಸುತ್ತಿದೆ. ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕೋಣನತಂಬಗಿ ಗ್ರಾಪಂ ಅಧ್ಯಕ್ಷ ಫಕ್ಕೀರೇಶ ಬಣಕಾರ, ಗ್ರಾಪಂ ಸದಸ್ಯ ಹೊಳಲಪ್ಪ ಪೂಜಾರ, ನೀಲಮ್ಮ ತಳವಾರ, ಶೇಖಯ್ಯ ಕುಲಕರ್ಣಿ, ನಾಗನಗೌಡ ಉತ್ತನಗೌಡ್ರ, ಯಮನಪ್ಪ ತಳವಾರ, ಚಂದ್ರಯ್ಯ ಹಿರೇಮಠ, ಫಕ್ಕೀರಪ್ಪ ಕಮತರ, ಜ್ಯೋತೆಪ್ಪ ಹೊಸಮನಿ, ಬಸಪ್ಪ ಹರಿಜನ, ಪುಟ್ಟಪ್ಪ ಹಡಪದ, ಗದಿಗೆಪ್ಪ ಯರೇಶಿಮಿ, ಕೊಟ್ರಯ್ಯ ಹಿರೇಮಠ, ಬಸವರಾಜ ಪೂಜಾರ, ಇತರರಿದ್ದರು.