

ಹಾವೇರಿ: ಎಲ್ಲಿಯವರೆಗೂ ಭಾರತದಲ್ಲಿ ಮುಸ್ಲಿಮರು ಇರುತ್ತಾರೋ ಅಲ್ಲಿಯವರೆಗೆ ಶಾಂತಿ ಇರಲ್ಲ ಎಂದು ಸ್ವತಃ ಡಾ.ಬಿ.ಆರ್ ಅಂಬೇಡ್ಕರ್ ಅವರೇ ಹೇಳಿದ್ದಾರೆ. ಶೇ.50ರಷ್ಟು ಮುಸಲ್ಮಾನರು ಜನಸಂಖ್ಯೆ ಹೆಚ್ಚಿದ ಪ್ರದೇಶದಲ್ಲಿ ಸಂವಿಧಾನ ಇರುವುದಿಲ್ಲ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿಕಾರಿದರು.
ಮಾಸೂರಿನ ಸ್ವಾತಿ ಬ್ಯಾಡಗಿ ಹತ್ಯೆ ಹಾಗೂ ಲವ್ ಜಿಹಾದ್ ಖಂಡಿಸಿ ನಗರದಲ್ಲಿ ಬುಧವಾರ ಕ್ರಾಂತಿವೀರ ಬ್ರಿಗೇಡ್‌ನಿಂದ ಆಯೋಜಿಸಿದ್ದ ಪ್ರತಿಭಟನಾ ರ‌್ಯಾಲಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಭಾರತದಲ್ಲಿರುವ ಕೊನೆಯ ಮುಸ್ಲಿಂ ಪಾಕಿಸ್ತಾನಕ್ಕೆ ಹೋಗಬೇಕು. ಪಾಕಿಸ್ತಾನದ ಕೊನೆಯ ಹಿಂದು ಭಾರತಕ್ಕೆ ಬರಬೇಕು ಎಂದಿದ್ದಾರೆ ಮಹಾನ್ ದೇಶಭಕ್ತ ಅಂಬೇಡ್ಕರ್. ಮುಸಲ್ಮಾನರು ಎಂದಿಗೂ ಮತ್ತೊಂದು ಧರ್ಮದವರನ್ನು ಸಹೋದರ ಎನ್ನುವುದಿಲ್ಲ. ಸುರಕುಂಬಾ, ಶರಬತ್ ಹಂಚಿದ ಕೂಡಲೇ ಭಾವೈಕ್ಯತೆ ಎನ್ನುವವರು ಕಾಶ್ಮೀರ ಘಟನೆಗೆ ಉತ್ತರ ಕೊಡಲಿ ಎಂದರು.
ಬಸವಣ್ಣನ ಕಾಲದಲ್ಲಿ ಮುಸ್ಲಿಮರು ಇರಲಿಲ್ಲ. ಹಾಗಾಗಿ, ಅವರ ಬಗ್ಗೆ ಬರೆದಿಲ್ಲ. ಸಮಾನತೆ ಬಗ್ಗೆ ಬರೆದಿದ್ದಾರೆ. ಆಗ ಮುಸ್ಲಿಮರು ಇದ್ದಿದ್ದರೆ ಖಂಡಿತ ಅವರ ಬಗ್ಗೆಯೂ ಬರೆಯುತ್ತಿದ್ದರು ಎಂದರು.
ಬ್ರಿಗೇಡ್ ರಾಜ್ಯ ಕಾರ್ಯಾಧ್ಯಕ್ಷ ಕೆ.ಇ ಕಾಂತೇಶ ಮಾತನಾಡಿ, ಸ್ವಾತಿ ಮೃತದೇಹವನ್ನು ಯಾಕೆ ಅಷ್ಟು ಬೇಗ ಅವರ ಕುಟುಂಬದವರಿಗೆ ತಿಳಿಸದೇ ಅಂತ್ಯಕ್ರಿಯೆ ಮಾಡಿದ್ದೀರಿ. ಸ್ವಾತಿ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಬ್ರಿಗೇಡ್ ಹೋರಾಟ ನಿಲ್ಲಲ್ಲ. ಸ್ವಾತಿ ಕುಟುಂಬದ ಒಬ್ಬರಿಗೆ ಕೆಎಂಎಫ್ ಅಥವಾ ಬೇರೆಡೆ ಸರ್ಕಾರಿ ನೌಕರಿ ಕೊಡಿಸಬೇಕು. 25 ಲಕ್ಷ ಪರಿಹಾರ ಕೊಡಬೇಕು. ಆರೋಪಿ ನಯಾಜ್‌ಗೆ ಜೀವಾವಧಿ ಶಿಕ್ಷೆ ಕೊಡಿಸಬೇಕು ಎಂದು ಆಗ್ರಹಿಸಿದರು.
ಸ್ವಾತಿ ಹತ್ಯೆ ಖಂಡಿಸಿ ನಗರದ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ಮೈಲಾರ ಮಹದೇವಪ್ಪ ವೃತ್ತದವರೆಗೆ ಸಾಗಿತು. ನಂತರ ಗೋಮಾತೆಗೆ ಪೂಜೆ ಸಲ್ಲಿಸುವ ಮೂಲಕ ವೇದಿಕೆ ಸಮಾರಂಭ ಉದ್ಘಾಟಿಸಲಾಯಿತು. ಕೌಲಗುಡ್ಡ ಸಿದ್ದಾಶ್ರಮದ ಶ್ರೀ ಅಮರೇಶ್ವರ ಸ್ವಾಮೀಜಿ ಮಾತನಾಡಿದರು.
ಹಳೇ ಹುಬ್ಬಳ್ಳಿ ನೀಲಕಂಠ ಮಠದ ಶ್ರೀ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ, ರಾಮದುರ್ಗದ ಪೂರ್ಣಾನಂದ ಮಠದ ಕೃಷ್ಣಾನಂದ ಸ್ವಾಮೀಜಿ, ಮಕಣಾಪುರದ ಸೋಮೇಶ್ವರ ಸ್ವಾಮೀಜಿ, ಆಲಮಟ್ಟಿ ಪೂರ್ಣಾನಂದ ಮಠದ ಶ್ರೀ ವಶಿಷ್ಠ ಸ್ವಾಮೀಜಿ, ಜೋಕಾನಟ್ಟಿಯ ಶ್ರೀ ಬಿಳಿಯಾನಸಿದ್ಧ ಸ್ವಾಮೀಜಿ, ತಂಗೋಡದ ಶ್ರೀ ಶಿವಕುಮಾರ ಸ್ವಾಮೀಜಿ, ಶಿವಶಂಕರ ಸ್ವಾಮೀಜಿ, ಪ್ರಭು ಸ್ವಾಮೀಜಿ, ಮಹೇಶ ಬೂಪನಾಳ, ಮತ್ತಿತರರು ಪಾಲ್ಗೊಂಡಿದ್ದರು.
ಕಣ್ಣೀರಿಟ್ಟ ಸ್ವಾತಿ ತಾಯಿ
ಯಾವೊಬ್ಬ ಹೆಣ್ಣುಮಗಳಿಗೂ ಈ ರೀತಿ ಅನ್ಯಾಯ ಆಗಬಾರದು. ನನ್ನ ಮಗಳಿಗೆ ನ್ಯಾಯ ಸಿಗಬೇಕು. ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಬೇಕು ಎಂದು ಸ್ವಾತಿ ತಾಯಿ ವೇದಿಕೆ ಮೇಲೆ ಕಣ್ಣೀರಿಟ್ಟರು.
ರಾಜಕಾರಣಿಗಳ ಬಾಗಿಲಲ್ಲಿ ಸ್ವಾಮೀಜಿಗಳು
ನಾನು ಸಿದ್ದೇಶ್ವರ ಅಪ್ಪಗಳು ಹಾಗೂ ಸಿದ್ದಗಂಗಾ ಶ್ರೀಗಳಿಗೆ ಮಾತ್ರ ಕಾಲಿಗೆ ನಮಸ್ಕರಿಸುತ್ತಿದ್ದೆ. ಬೆಳಗ್ಗೆ ಎದ್ದ ಕೂಡಲೇ ಸಿದ್ದರಾಮಯ್ಯ, ಯಡಿಯೂರಪ್ಪ ಮನೆಯಲ್ಲಿ ಕಾಣಿಸುವ ಸ್ವಾಮೀಜಿಗಳ ಕಾಲಿಗೆ ನಮಸ್ಕರಿಸುವುದಿಲ್ಲ. ಹಿಂದುಗಳಿಗೆ ಅನ್ಯಾಯ ಆದಾಗ ಗೌರವ ಕೊಡುವ ಸ್ವಾಮೀಜಿಗಳು ಬೇಕಿದೆ. ಹೆಲಿಕಾಪ್ಟರ್‌ನಲ್ಲಿ ಓಡಾಡುವ ಸ್ವಾಮೀಜಿಗಳು ಬೇಡ.
43 ಕೇಸ್ ಹಾಕಿಸಿದ್ದರೂ ಬಗ್ಗಲ್ಲ
ಪೊಲೀಸರಿಗೆ ನನ್ನ ಮೇಲೆ ಬಹಳ ಪ್ರೀತಿ. ನನ್ನ ಮೇಲೆ ಈಗಾಗಲೇ 43 ಕೇಸ್ ಹಾಕಿಸಿದ್ದಾರೆ. ಇವತ್ತೂ ಹಾಕಬಹುದು. ಹಾಕಲಿ. ಹಿಂದು ಪೊಲೀಸ್ ಅಧಿಕಾರಿಗಳು ಗಟ್ಟಿ ಆಗಬೇಕು. ಸಿದ್ದರಾಮಯ್ಯ ಹೇಳಿದರೂ ಕೇಳಬಾರದು. ಹಿಂದುಗಳು ಯಾರ ಮನಿ ಸುಡಲ್ಲ. ಮುಸ್ಲಿಂ ಹುಡುಗಿಯರನ್ನು ಅತ್ಯಾಚಾರ ಮಾಡಲ್ಲ. ಅಧಿಕಾರಿಗಳು ಅಧರ್ಮ ತೋರುವ ಮುಸ್ಲಿಮರಿಗೆ ಪಾಠ ಕಲಿಸಬೇಕು. ಹೆಚ್ಚೆಂದರೆ ನಿಮ್ಮನ್ನು ವರ್ಗಾವಣೆ ಮಾಡಬಹುದು. ಮುಂದೆ ನಮ್ಮ ಸರ್ಕಾರ ಬಂದಾಗ ನಿಮಗೆ ಪ್ರಮೋಷನ್ ಮಾಡುತ್ತೇವೆ. ಹಿಂದುಗಳನ್ನು ಬೆಂಬಲಿಸುವ ಅಧಿಕಾರಿಗಳನ್ನು ಪಟ್ಟಿ ಮಾಡಿ ಎಂದು ಕರೆ ನೀಡಿದರು.
ಕೋಟ್:
ಹಿಂದುಗಳು ಒಗ್ಗಟ್ಟಾಗಿ ನಿಲ್ಲಬೇಕು. ಕಾಶ್ಮೀರದ ಉಗ್ರರ ಹತ್ಯಾಕಾಂಡದ ನಂತರ ನಾನು ದಲಿತ, ಕುರುಬ, ಲಿಂಗಾಯತ, ಬ್ರಾಹ್ಮಣ, ನೇಕಾರ ಎಂದು ಹೇಳಿದರೆ ಯಾವುದೂ ನಡೆಯಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಯೋಗಿ ಆದಿತ್ಯನಾಥ ಅವರಂತಹ ಮುಖ್ಯಮಂತ್ರಿ ರಾಜ್ಯಕ್ಕೆ ಬೇಕು. ಕುಂಕುಮ, ಭಂಡಾರ, ಅಂಬೇಡ್ಕರ್ ಸಂವಿಧಾನ ಉಳಿಯಬೇಕಾದರೆ ಹಿಂದುತ್ವ ಉಳಿಯಬೇಕು. ಫೇಸ್‌ಬುಕ್ ಹುಲಿ ಆಗಬೇಡಿ. ಚುನಾವಣೆಯಲ್ಲಿ ಹಿಂದುಗಳನ್ನು ಎತ್ತಿ ಹಿಡಿಯುವವರಿಗೆ ಮತ ಹಾಕಿ.
- ಬಸನಗೌಡ ಪಾಟೀಲ ಯತ್ನಾಳ, ಶಾಸಕ
ಲವ್ ಕೇಸರಿಗೆ ಕರೆ ಕೊಟ್ಟ ಕೆ.ಇ ಕಾಂತೇಶ
ಆರಂಂಭದಲ್ಲಿ ಯಾವೊಬ್ಬ ನಾಯಕರೂ ಸ್ವಾತಿ ಬ್ಯಾಡಗಿ ಮನೆಗೆ ಹೋಗಲಿಲ್ಲ. ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಸ್ವಾತಿ ಮನೆಗೆ ಹೋದ ಬಳಿಕ ರಾಜ್ಯ ಸರ್ಕಾರ ಐದು ಲಕ್ಷ ರೂ. ಪರಿಹಾರ ಕೊಟ್ಟು ಕೈತೊಳೆದುಕೊಂಡಿತು. ಮುಸಲ್ಮಾನ ಯುವತಿಗೆ ಈ ಪರಿಸ್ಥಿತಿ ಬಂದಿದ್ದರೆ ಹೀಗೆ ಮಾಡುತ್ತಿರಲಿಲ್ಲ. ಹಿಂದುಗಳು ಮುಸ್ಲಿಂ ಯುವತಿಯರನ್ನು ಲವ್ ಮಾಡಬೇಕು ಎಂದು ಲವ್ ಕೇಸರಿಗೆ ಕೆ.ಇ ಕಾಂತೇಶ ಕರೆಕೊಟ್ಟರು.