ಸ್ವಾತಿ ಹಂತಕರಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ; ನೇತಾಜಿ ಸುಭಾಷ್ ಚಂದ್ರ ಭೋಸ್ ಯುವಕ ಮಂಡಳಿ ಆಗ್ರಹ

17 HVR 6
Published on

ಹಾವೇರಿ: ನಗರದ ಸುಭಾಷ್ ವೃತದಲ್ಲಿ ನೇತಾಜಿ ಸುಭಾಷ್ ಚಂದ್ರ ಭೋಸ್ ಯುವಕ ಮಂಡಳಿ ವತಿಯಿಂದ ಸ್ವಾತಿ ಬ್ಯಾಡಗಿ ಆತ್ಮಕ್ಕೆ ಶಾಂತಿ ಕೋರಿ ಮೇಣದ ಬತ್ತಿ ಹಚ್ಚಿ ಶ್ರದ್ದಾಂಜಲಿ ಸಲ್ಲಿಸಲಾಯಿತು. ತಪ್ಪಿತಸ್ಥರಿಗೆ ಶೀಘ್ರವಾಗಿ ಮರಣದಂಡನೆ ವಿಧಿಸುವಂತೆ ಆಗ್ರಹಿಸಲಾಯಿತು.

ಮಂಡಳಿಯ ಗೌರವಾಧ್ಯಕ್ಷ ಸಂತೋಷ ಆಲದಕಟ್ಟಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪ್ರೇಮದ ಹೆಸರಿನಲ್ಲಿ ಕೊಲೆಗಳು ಹೆಚ್ಚಾಗುತ್ತಿವೆ. ಅನ್ಯಕೋಮಿನ ಯುವಕರು ಹಿಂದು ಯುವತಿಯರನ್ನು ಪ್ರೇಮಪಾಷಕ್ಕೆ ಸಿಲುಕಿಸಿ ನಂತರ ಅವರನ್ನು ಮದುವೆಯಾಗದೇ ಹತ್ಯೆ ಮಾಡುವಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಮಾಸೂರಿನ ಯುವತಿ ನಯಾಜ್ ಎಂಬ ಯುವಕನ ಸುಳ್ಳು ಪ್ರೇಮಕ್ಕೆ ಬಲಿಯಾಗಿದ್ದಾಳೆ ಎಂದರು.

ಪೊಲೀಸರು ಶವ ದೊರೆತ ದಿನವೇ ಶವಸಂಸ್ಕಾರ ಮಾಡಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಘಟನೆಯ ಕುರಿತು ಪೊಲೀಸ್ ವರಿಷ್ಠಾಧಿಕಾರಿಗಳು ಕೂಲಂಕಶವಾಗಿ ತನಿಖೆ ಮಾಡಬೇಕು. ತರಾತುರಿಯಲ್ಲಿ ಶವ ಸಂಸ್ಕಾರ ಮಾಡಲು ಯಾವುದಾದರೂ ಅನ್ಯವಕ್ತಿ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರೆ ಅಂಥವರನ್ನು ಸಹ ಆರೋಪಿಗಳೆಂದು ಪರಿಗಣಿಸಿ ಬಂಧಿಸಬೇಕು ಎಂದರು.

ಮಾಜಿ ಶಾಸಕ ಶಿವರಾಜ ಸಜ್ಜನರ, ಯುವಕ ಮಂಡಳಿಯ ಅಧ್ಯಕ್ಷ ನಿಖಿಲ ಡೊಗ್ಗಳ್ಳಿ , ಪ್ರಭು ಹಿಟ್ನಳ್ಳಿ, ವಿಜಯಕುಮಾರ ಚಿನ್ನಿಕಟ್ಟಿ, ರಮೇಶ ಪಾಲಕರ, ಯುವ ಬ್ರಿಗೇಡ್ ಸಂಚಾಲಕ ಅಭಿಷೇಕ ಉಪ್ಪಿನ, ಅಭಿಷೇಕ ಬ್ಯಾಡಗಿ, ನಿಖಿಲ್ ಹಿರೇಮಠ, ಲಿಂಗರಾಜ ಸಾತೇನಹಳ್ಳಿ, ಪ್ರಶಾಂತ ಗಾಣಿಗೇರ, ಮನ್ವಿತ ಬೆಟಗೇರಿ, ಮಂಜು ಬಾವಿನಮನೆ, ವಿಶಾಲ ಕಲಾಲ, ಲಿಂಗರಾಕಜ ಹಾದಿಮನಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net