

ಹಾವೇರಿ: ಪ್ರಿಯಕರ ನಯಾಜ್ ಬೆಣ್ಣಿಗೇರಿ ಹಾಗೂ ಆತನ ಸ್ನೇಹಿತರಿಂದ ಹತ್ಯೆಗೀಡಾದ ಮಾಸೂರ ಗ್ರಾಮದ ಸ್ವಾತಿ ಬ್ಯಾಡಗಿ ಕುಟುಂಬದವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಸ್ವಾತಿ ಕೊಲೆ ಪ್ರಕರಣದ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹಾಗೂ ಹಿರೇಕೆರೂರ ಶಾಸಕ ಯು.ಬಿ ಬಣಕಾರ ಅವರು ಸಿಎಂ ಭೇಟಿ ಮಾಡಿ, ಪರಿಹಾರ ಘೋಷಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಸಿಎಂ 5 ಲಕ್ಷ ರೂ. ಬಿಡುಗಡೆ ಮಾಡಿದ್ದಾರೆ. ಪರಿಹಾರ ಕೊಡಿಸುವ ಹಿನ್ನೆಲೆಯಲ್ಲಿ ಸ್ವಾತಿ ನಿವಾಸಕ್ಕೆ ನಾನು ಭೇಟಿ ಮಾಡಿರಲಿಲ್ಲ. ಸರ್ಕಾರದ ಪರವಾಗಿ ಶಾಸಕ ಬಣಕಾರ ಭೇಟಿಯಾಗಿ ಸಾಂತ್ವನ ಹೇಳಿದ್ದರು. ಸ್ವಾತಿ ನಿವಾಸಕ್ಕೆ ನಾನು ಭೇಟಿ ನೀಡಿ, ಸಾಂತ್ವನ ಹೇಳುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ.