ಕಬ್ಬು ಬೆಳೆಗಾರರು, ಕಾರ್ಖಾನೆ ಮಾಲೀಕರ ಸಭೆ ಡಿ.2ರಂದು

Kabbu belegara
Published on

ಹಾವೇರಿ: ದೇವಗಿರಿಯ ಜಿಲ್ಲಾಧಿಕಾರಿಯವರ ಕಚೇರಿಯ ಕೋರ್ಟ್ ಹಾಲ್‌ನಲ್ಲಿ ಡಿ.2ರಂದು ಬೆಳಗ್ಗೆ 10 ಗಂಟೆಗೆ ಪ್ರಸಕ್ತ ಸಾಲಿನ ಹಂಗಾಮಿನ ಕಬ್ಬು ಅರೆಯುವ ಕಾರ್ಯದ ಕುರಿತು ಚರ್ಚಿಸಲು ಕಬ್ಬು ಬೆಳೆಗಾರ ರೈತ ಮುಖಂಡರು ಹಾಗೂ ಕಾರ್ಖಾನೆಯವರೊಂದಿಗೆ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.

ರೈತ ಮುಖಂಡರು, ಕಬ್ಬು ಬೆಳೆಗಾರರು, ವಿವಿಧ ರೈತ ಸಂಘಟನೆಯ ಅಧ್ಯಕ್ಷರು, ಪದಾಧಿಕಾರಿಗಳು ಸಭೆಗೆ ಆಗಮಿಸಬೇಕು. ಸಭೆಯಲ್ಲಿ ಕಬ್ಬಿನ ಲಾರಿಗಳಿಗೆ ಟೋಲ್ ಸಂಗ್ರಹ ವಸೂಲಿ ಕೈಬಿಡುವುದು, ರೈತ ಬೆಳೆದ ಕಬ್ಬಿಗೆ ದರ ನಿಗದಿ ಮಾಡುವುದು, ವಾಯುಮಾಲಿನ್ಯ, ಹಳೆಯ ಬಾಕಿ ಕೊಡಿಸುವ ಕುರಿತು ಸೇರಿದಂತೆ ಇತರ ವಿಷಯಗಳ ಕುರಿತು ಚರ್ಚೆ ಮಾಡಬೇಕಿದೆ. ರೈತರ ಒಗ್ಗಟ್ಟಿನಲ್ಲಿ ಬಲವಿದೆ. ಸರ್ಕಾರ ರೈತರಿಗೆ ನ್ಯಾಯಯುತವಾದ ಬೆಲೆ ಕೊಡಿಸುತ್ತೆ ಎಂಬ ಭರವಸೆ ಇದೆ. ಆದ ಕಾರಣ ಎಲ್ಲ ರೈತ ಮುಖಂಡರು ಸಭೆಗೆ ಹಾಜರಾಗಿ, ಅನಿಸಿಕೆ ವ್ಯಕ್ತಪಡಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ ಪ್ರಕಟಣೆ ಮೂಲಕ ವಿನಂತಿ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net