ಕಬ್ಬಿನ ಬಾಕಿ ಬಿಲ್ ಕೊಡಿಸುವುದು ನನ್ನ ಜವಾಬ್ದಾರಿ

Shivanand Patil 2
Published on

ಹಾವೇರಿ: ಕಳೆದ ವರ್ಷ ನೂರಕ್ಕೆ ನೂರರಷ್ಟು ಕಬ್ಬಿನ ಬಿಲ್ ಕೊಡಿಸಿದ್ದೇವೆ. ಈ ಬಾರಿ ಬಾಕಿ ಇದ್ದು, ಜನವರಿವರೆಗೂ ಶುಕ್ರವಾರ ಪಾವತಿಯಾಗಿದೆ. ಫೆಬ್ರವರಿ ಬಿಲ್ ಬಾಕಿ ಇದೆ. ಸಕ್ಕರೆ ಧಾರಣೆ ಏರುತ್ತಿಲ್ಲ. ಯಾರಿಗೂ ಹೇಳದೇ ಕೇಳದೇ ಕೇಂದ್ರ ಸರ್ಕಾರ ಎಥೆನಾಲ್ ಪಾಲಿಸಿ ಜಾರಿಗೊಳಿಸಿದೆ. ಇದರಿಂದಾಗಿ ಸಕ್ಕರೆ ಧಾರಣೆ ಏರುತ್ತಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಕ್ಕರೆ ಧಾರಣೆ 55 ರೂ. ಇದೆ. ಭಾರತದಲ್ಲಿ 34ಕ್ಕೆ ನಿಂತಿದೆ. ಇದು ಈ ದೇಶದ ದುರ್ದೈವ. ಯಾವುದೇ ಬೆಳೆ ಬೆಳೆದರೂ ರೈತನಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಕಬ್ಬಿನ ಬಾಕಿ ಕೊಡಿಸುವುದು ನನ್ನ ಜವಾಬ್ದಾರಿ ಎಂದು ಸಚಿವ ಶಿವಾನಂದ ಪಾಟೀಲ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net